ಚಾಮರಾಜನಗರ : ಅಕ್ರಮವಾಗಿ ತಮಿಳುನಾಡಿಗೆ ಪಡಿತರ ಅಕ್ಕಿ ಸಾಗಾಟ ಹಿನ್ನೆಲೆಯಲ್ಲಿ ಒಂದು ಲೋಡ್ ಪಡಿತರ ಅಕ್ಕಿಯನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪೊಲೀಸ್ ಠಾಣೆಯ ಮುಂದೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರು ಹಾಗು ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು ಶಿಗ್ಗಾವಿಯಿಂದ ತಮಿಳುನಾಡಿಗೆ ಲಾರಿ ತೆರಳುತ್ತಿತ್ತು. ಲಾರಿಯಲ್ಲಿ ಸಾಗಿಸುತ್ತಿದ್ದ 500 ಚೀಲ ಪಡಿತರ ಅಕ್ಕಿಯನ್ನು ಹಾಗೂ ಡ್ರೈವರ್ ನನ್ನು ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.