ಬೆಳಗಾವಿ : ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇತ್ತೀಚಿಗೆ ಕೈಯಲ್ಲಿ ಲಾಂಗ್ ಹಿಡಿದು ಮಾಡಿದ ಪ್ರಕರಣ ನಡೆದಿತ್ತು. ಬಳಿಕ ಬೆಳಗಾವಿಯಲ್ಲಿ ಕೂಡ ಇಬ್ಬರು ಪುಂಡರು ಕೈಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ಮಾಡಿದ್ದರು. ಇದೀಗ ಇಬ್ಬರು ಪುಂಡರನ್ನು ಯಮುಕನಮರಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯಮಕನಮರಡಿ ಠಾಣೆ ಪೋಲಿಸರು ಇಬ್ಬರು ಕಿಡಿಗೇಡಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಇಬ್ಬರು ಕಿಡಿಗೇಡಿಗಳು ಕೈಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಹಾಲಪ್ಪ ದ್ಯಾಮಪ್ಪ ಕಟಾವಳಿ (25) ನಾಗರಾಜ್ ದ್ಯಾಮಣ್ಣ (21) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಿ ಪೊಲೀಸರು ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ.