ಮಂಗಳೂರು : ಸುಹಾಸ್ ಶೆಟ್ಟಿ ಅತ್ತೆ ಬಳಿಕ ಇದೀಗ ಮಂಗಳೂರಿನ ಜನತೆ ಭಯದಲ್ಲಿ ಜೀವಿಸುತ್ತಿದ್ದು, ಸುಹಾಸ್ ಹತ್ಯೆಯ ಬಳಿಕ ಮಂಗಳೂರಿನಲ್ಲಿ ಪ್ರತಿಕಾರದ ಸಂದೇಶಗಳು ಇದೀಗ ಮುಂದುವರೆದಿದೆ. ಸುಹಾಸ್ ಶೆಟ್ಟಿಯನ್ನು ಕೊಂದವರು ಕೊಂದವರ ಮನೆಯವರು ಅಲ್ಲಿ ಯಾರು ಸಿಗುತ್ತಾರೋ ಅವರನ್ನು ಕೊಚ್ಚಿ ಕೊಲ್ಲುತ್ತೇವೆ ಎಂದು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿ ಬಿಡಲಾಗಿದೆ.
ಧನುಷ್ ಎಂಬಾತ ಫೇಸ್‌ಬುಕ್ ಲೈವ್ ಬಂದು ಕೊಲೆ ಬೆದರಿಕೆ ಹಾಕಿದ್ದಾನೆ. ಜಾಸ್ತಿ ದಿನ ತೆಗೆದುಕೊಳ್ಳಲ್ಲ ತಕ್ಷಣವೇ ರಿವೇಂಜ್ ಅಂತ ತೆಗೆದುಕೊಳ್ಳುತ್ತೇವೆ. ಸುಹಾಸ್ ಶೆಟ್ಟಿ ಕೊಂದವರ ಮೇಲೆ ರಿವೆಂಜ್ ತೆಗೆದುಕೊಳ್ಳುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ನಿವಾಸಿ ಧನುಷ್ ಪಕ್ಕಳ ಕೊಲೆ ಬೆದರಿಕೆ ಹಾಕಿದ್ದು ಇದೀಗ ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಧನುಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಮು ದ್ವೇಷ ಹರಡಿ ಕಾನೂನು ಸುವ್ಯವಸ್ಥೆಗೆ ಯಾಕೆ ಆಗುವಂತಹ ಹಾಗೂ ಪ್ರಚೋದನಾತ್ಮಕ ವಿಡಿಯೋವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಧನುಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಬಿಎನ್ಎಸ್ ಆಕ್ಟ್ 196 (1) (A) 353 (1) (c) ಅಡಿ ಕೇಸ್ ದಾಖಲಾಗಿದೆ. ಇದೀಗ ಧನುಷ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.