ಬಾಗಲಕೋಟೆ : ಪ್ರಕೃತಿ ವಿಕೋಪಗಳು, ಸುನಾಮಿ, ಭೂಕಂಪ, ರಾಜ್ಯ ರಾಜಕಾರಣ ಹಾಗೂ ದೇಶದ ಕುರಿತಂತೆ ಭವಿಷ್ಯ ಹೇಳಿ, ಕೋಡಿ ಮಠದ ಶ್ರೀಗಳು ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಮತ್ತೊಂದು ಸ್ಫೋಟವಾದ ಭವಿಷ್ಯ ನುಡಿದಿದ್ದು, ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ.
ಬಾಗಲಕೊಟೆಯಲ್ಲಿಂದು ಮಾತನಾಡಿರುವ ಕೋಡಿಮಠದ ಸ್ವಾಮೀಜಿ, ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ.
ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.
🔥 ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ 🔥 👇