ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಸಾಗರ ನಗರದ ಮರ್ಕಜ್ ಶಾಲೆಯು ಸತತ 7ನೇ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದೆ.
ಸಾಗರದ ತ್ಯಾಗರ್ತಿ ಕ್ರಾಸಿನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಮರ್ಕಜುಲ್ ಉಲೂಮ್ ಎಜ್ಯುಕೇಷನಲ್ ಅಕಾಡೆಮಿ ಸಂಸ್ಥೆಯ ಆಯಿಷಾ ಹೈದ್ರೂಸ್ ಆಂಗ್ಲ ಮಾಧ್ಯಮ ಪ್ರಾಢಶಾಲೆಯು ಸತತ 7ನೇ ಬಾರಿ ಶೇ.100 ಫಲಿತಾಂಶ ಪಡೆದಿದೆ.
ಸತತವಾಗಿ 7ನೇ ಬಾರಿಗೆ 100% ಫಲಿತಾಂಶ ಪಡೆದಿರುವ ಆಯಿಷಾ ಹೈದ್ರೂಸ್ ಆಂಗ್ಲ ಮಾಧ್ಯಮ ಪ್ರಾಢಶಾಲೆಯಲ್ಲಿ ಈ ವರ್ಷ 26 ವಿದ್ಯಾರ್ಥಿಗಳು ಪರೀಕ್ಷೆ ಕುಳಿತಿದ್ದು ಎಲ್ಲಾ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪೋಷಕರಿಗೆ, ಶಿಕ್ಷಣ ಸಂಸ್ಥೆಗೆ ಹಾಗೂ ತಮಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ ಕೀರ್ತಿಯನ್ನು ತಂದಿದ್ದಾರೆ.
ಈ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮಶಿತಾ 594/625 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ, ಕುಮಾರಿ ತಹಸೀನ್ ಆಯಿಷಾ 581/625 ದ್ವಿತೀಯ ಸ್ಥಾನ ಹಾಗೂ ಮಿಸ್ಬಾ ಎ ಆರ್ 574/625 ಪಡೆದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ. ಮುಂದೆಯೂ ಉತ್ತಮ ಸಾಧನೆ ಮಾಡಲಿ ಅಂತ ಶಾಲಾ ಆಡಳಿತ ಮಂಡಳಿ ಹಾರೈಸಿದೆ.