ನವದೆಹಲಿ : ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದನ್ನು ಗೌಪ್ಯವಾಗಿಟ್ಟಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಯೋಧನನ್ನು ಇದೀಗ ಸೇನೆ ಸೇವೆಯಿಂದ ವಜಾಗೊಳಿಸಿದೆ.
ಹೌದು ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮುನಿರ್ ಅಹಮದ್ ಸೇವೆಯಿಂದ ವಜಾಗೊಂಡ ಯೋಧ ಎಂದು ತಿಳಿದುಬಂದಿದೆ. ಮುನೀರ್ ಅಹಮದ್ ಅರಿಶಿನ ಪಡೆದ 41ನೇ ಬೆಟಾಲಿಯನ್ ಗೆ ಸೇರಿದು ಅವರನ್ನು ಇದೀಗ ಸೇವೆಯಿಂದ ವಜಾಗೊಳಿಸಲಾಗಿದೆ. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಸಿಆರ್‌ಪಿಎಫ್ ವಕ್ತಾರರೂ ಆದ ಡಿಐಜಿ ದಿನಕರನ್ ಮಾಹಿತಿ ನೀಡಿದ್ದಾರೆ.
ತಾನು ವಿವಾಹವಾಗಿದ್ದು ಮತ್ತು ಯುವತಿ ಭಾರತದಲ್ಲಿ ವೀಸಾ ಅವಧಿ ಮೀರಿದ್ದರು ಇಲ್ಲಿಯೇ ನೆಲೆಸಿದ್ದನ್ನು ಯೋಧ ಅಹ್ಮದ್ ಗೋಪ್ಯವಾಗಿಟ್ಟಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ವಜಾಗೊಳಿಸಿ, ತನಿಖೆ ನಡೆಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಸಿಆರ್‌ಪಿಎಫ್ ವಕ್ತಾರರೂ ಆದ ಡಿಐಜಿ ದಿನಕರನ್ ಮಾಹಿತಿ ನೀಡಿದ್ದಾರೆ.
ಏ. 22ರಂದು ಪಹಲ್ಲಾಮ್‌ನ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.ಘಟನೆಯಲ್ಲಿ ಒಟ್ಟು 26 ಜನ ಮೃತಪಟ್ಟರು. ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧ ತುಂಡಾಗಿದೆ. ಪಾಕಿಸ್ತಾನದ ಪ್ರಜೆಗಳನ್ನು ದೇಶ ತೊರೆಯುವಂತೆ ಭಾರತ ಸರ್ಕಾರ ಆದೇಶಿಸಿತ್ತು. ಇದೇ ಸಂದರ್ಭದಲ್ಲಿ 2024ರ ಮೇ 24ರಂದು ವಿಡಿಯೊ ಕರೆ ಮೂಲಕ ಪಾಕಿಸ್ತಾನದ ಮೆನಲ್ ಖಾನ್ ಎಂಬುವವರನ್ನು ಅಹ್ಮದ್ ವರಿಸಿದ್ದು ಬೆಳಕಿಗೆ ಬಂದಿದೆ.