ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು ವಯೋಸಹಜ ಕಾಯಿಲೆಗಳಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಅವರಿಗೆ 90 ವರ್ಷ ವಯಸ್ಸಾಗಿತ್ತು.
“ನಿರ್ಮಲ್ ಕಪೂರ್ ಅವರು ಇಂದು ಸಂಜೆ 5: 20 ರ ಸುಮಾರಿಗೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ವಯೋಸಹಜ ಸಮಸ್ಯೆಗಳಿಂದಾಗಿ ನಿಧನರಾದರು. ಕೆಲವು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಪವನ್ ಹನ್ಸ್ ಚಿತಾಗಾರದಲ್ಲಿ ನಡೆಯಲಿದೆ. ನಿರ್ಮಲ್ ಕಪೂರ್ ಚಲನಚಿತ್ರ ನಿರ್ಮಾಪಕ ಸುರಿಂದರ್ ಕಪೂರ್ ಅವರನ್ನು ವಿವಾಹವಾದರು, ಅವರೊಂದಿಗೆ ಅನಿಲ್, ರೀನಾ, ಬೋನಿ ಮತ್ತು ಸಂಜಯ್ ಎಂಬ ನಾಲ್ಕು ಮಕ್ಕಳಿದ್ದರು. ಅವರ ಮೊಮ್ಮಕ್ಕಳಲ್ಲಿ ಸೋನಮ್ ಕಪೂರ್, ರಿಯಾ, ಹರ್ಷವರ್ಧನ್, ಅರ್ಜುನ್, ಜಾನ್ವಿ, ಖುಷಿ ಮತ್ತು ಅನ್ಶುಲಾ, ಶನಾಯಾ, ಜಹಾನ್ ಮತ್ತು ಮೋಹಿತ್ ಮಾರ್ವಾ ಸೇರಿದ್ದಾರೆ








