ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಹೈ ಸ್ಕೂಲ್ ಚಿರಂಜೀವಿ ಪ್ರಣವಿ. ಎನ್. ರಾಜ್ ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆ-1ರಲ್ಲಿ ಎರಡನೇ ಶ್ರೇ ಯಾಂಕದಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ನ್ಯಾಷನಲ್ ಹೈಸ್ಕೂಲ್ ಶಿಕ್ಷಣ ಸಂಸ್ಥೆ ರ್ಯಾಂಕಿಂಗ್ ಪರಂಪರೆಯನ್ನು ಮುಂದುವರೆಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ-1ರಲ್ಲಿ ಅಮೋಘ ಸಾಧನೆ ಮಾಡಿದ ಪ್ರಣವಿ. ಎನ್. ರಾಜ್. ಅವರಿಗೆ ಎನ್ಇಎಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಶಾಲೆಯ ಎಲ್ಲಾ ಅಧ್ಯಾಪಕರು, ಕಚೇರಿ, ಹಾಗೂ ಇತರೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಎನ್.ಇ.ಎಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಮಣ್ಯ, ಗೌರವ ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ ಮತ್ತಿತರರು ವಿದ್ಯಾರ್ಥಿ ಹಾಗೂ ಪೋಷಕರನ್ನು ಅಭಿನಂದಿಸಿ, ಉತ್ತಮ ರೀತಿಯಲ್ಲಿ ಶಿಕ್ಷಣ ಮುಂದುವರೆಸುವಂತೆ ಹುರಿದುಂಬಿಸಿದರು.
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ
BREAKING: ಕನ್ನಡಿಗರನ್ನು ಉಗ್ರಗಾಮಿಗಳಿಗೆ ಹೋಲಿಸಿದ ಖ್ಯಾತ ಗಾಯ ಸೋನು ನಿಗಮ್ ವಿರುದ್ಧ ದೂರು ದಾಖಲು