ಮಂಡ್ಯ : ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ಪ್ರೌಢಶಾಲಾ ವಿಭಾಗದಲ್ಲಿ ಪ್ರಸ್ತಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಸಿ.ಪುನೀತಾ ರಾಜ್ಯಕ್ಕೆ ದ್ವಿತೀಯ ಹಾಗೂ ಎಲ್.ಅನನ್ಯ 4 ನೇ ಸ್ಥಾನಗಳಿಸಿ ತೇರ್ಗಡೆಯಾಗುವ ಮೂಲಕ ತಾಲೂಕಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಬಿಇಒ ಧನಂಜಯ
ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಪುರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಶೇ.(99.84) ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ ಸಿ.ಪುನೀತಾ ಹಾಗೂ 622 ಶೇ(99.5) ರಷ್ಟು ಅಂಕಗಳಿಸಿ ರಾಜ್ಯಕ್ಕೆ 4 ನೇ ಸ್ಥಾನಗಳಿಸಿದ ಎಲ್.ಅನನ್ಯ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ತೆರ್ಗಡೆಗೊಂಡ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪರೀಕ್ಷೆಗೆ ಹಾಜರಾಗಿದ್ದ ಶಾಲೆಯ ಒಟ್ಟು 175 ವಿದ್ಯಾರ್ಥಿಗಳ ಪೈಕಿ 169 ವಿದ್ಯಾರ್ಥಿಗಳು ಉತ್ತೀಣರಾಗುವ ಮೂಲಕ ಶೇ.96 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಇವರಲ್ಲಿ 15 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು
ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ ಸಂತಸ ವ್ಯಕ್ತಪಡಿಸಿದರು.
ಎ.ಸಿಂಧು 617, ಕೆ.ಎಸ್.ರಿಷಭಗೌಡ 616, ಎನ್.ಕೆ.ಯಶವಂತ್ 616, ಮೇಘನ ಎಸ್ ಗೌಡ, 611, ಸಿ.ಪಿ.ತೇಜಸ್ವಿನಿ 610, ಸಿ.ಜೆ.ನಮ್ರತಾ 609, ಕೆ.ಚಿರಂತ್ 606, ಎಂ.ಎಸ್.ಜೀವಿತ 606, ಎಸ್.ಆರ್.ಲಿಖಿತಾರಾಜು 605, ಕೆ.ಎಸ್.ಪ್ರೀತಮ್ 602, ಎಂ.ವಿ.ತುಷಾರ್ ನಾಯಕ್ 601 ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿಅನಂತೇಗೌಡ, ಕಾರ್ಯದಶರ್ಿ ಎಚ್.ಆರ್.ಅನಂತೇಗೌಡ, ಶಾಲೆಯ ಶಿಕ್ಷಕರ ವೃಂದ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಪಾಕಿಸ್ತಾನದ ದಾಸು-ಮನ್ಸೆಹ್ರಾ 765Kv ಪ್ರಸರಣ ಮಾರ್ಗದ ಮೇಲೆ ರಾನ್ಸಮ್‌ವೇರ್ ದಾಳಿ
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ