ಕೋಲಾರ: ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎನ್ನಲಾಗುತ್ತಿದೆ. ಇಂತಹ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೋ ಕೊಡೋದಿಲ್ಲ ಅಂತ ಕರ್ನಾಟಕದ ರೈತರು ನಿರ್ಧರಿಸಿದ್ದಾರೆ.
ಕೋಲಾರದಲ್ಲಿ ರೈತನೊಬ್ಬ ಮಾತನಾಡಿ, ಪಹಲ್ಗಾಮ್ ಉಗ್ರರ ದಾಳಿಗೆ ಕಾರಣವಾದಂತ ಪಾಕಿಸ್ತಾನಕ್ಕೆ ಟೊಮ್ಯಾಟೋ ಸರಬರಾಜು ನಿಲ್ಲಿಸೋದಾಗಿ ತಿಳಿಸಿದರು.
ಈಗಾಗಲೇ ಕೋಲಾರದಿಂದ ಪಾಕಿಸ್ತಾನಕ್ಕೆ ಟನ್ ಗಟ್ಟಲೇ ಸರಬರಾಜು ಮಾಡಲಾಗುತ್ತಿದ್ದಂತ ಟೊಮ್ಯಾಟೋ ನಿಲ್ಲಿಸಲಾಗಿದೆ. ಪಹಲ್ಗಾಮ್ ದಾಳಿಯ ಬಳಿಕ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಬದ್ಧವಾಗಿದ್ದೇವೆ ಎಂದರು.
ಮಾನವೀಯತೆ ದೃಷ್ಠಿಯಿಂದ ಟೊಮ್ಯಾಟೋ ಕೊಡುತ್ತೇವೆ. ಆದರೇ ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ನಂತ್ರ ಪಾಕಿಸ್ತಾನಕ್ಕೆ ಟೊಮ್ಯಾಟೋ ಸರಬರಾಜನ್ನೇ ನಿಲ್ಲಿಸುವುದಾಗಿ ತಿಳಿಸಿದರು.