ಚಿಕ್ಕಬಳ್ಳಾಪುರ: ತನ್ನ ಒಂದು ವರ್ಷದ ಮಗುವಿನ ಎದುರೇ ಜೋಳಿಗೆಗೆ ನೇಣು ಬಿಗಿದುಕೊಂಡು ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಸಿಎಂಸಿ ಬಡಾವಣೆಯಲ್ಲಿ ರಾಜ್ಯದಲ್ಲೇ ಧಾರುಣ ಘಟನೆ ಎನ್ನುವಂತ ಘಟನೆ ನಡೆದಿದೆ. ತನ್ನ ಒಂದು ವರ್ಷದ ಮುಗಿವನ ಎದುರೇ ತಾಯಿ ಝಾನ್ಸಿ(23) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಝಾನ್ಸಿ ಪತಿ ಕ್ರೈನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಗೆ ಊಟಕ್ಕೆ ಬಂದಾಗ ಪತ್ನಿ ಮಗುವಿನ ಜೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್