ಹಾವೇರಿ: ಕರ್ತವ್ಯದ ಅವಧಿಯಲ್ಲೇ ಬಸ್ ನಿಲ್ಲಿಸಿ ಸಾರಿಗೆ ಬಸ್ಸಿನಲ್ಲಿಯೇ ನಮಾಜ್ ಮಾಡಿದಂತ ಘಟನೆ ವೀಡಿಯೋ ವೈರಲ್ ಆಗಿತ್ತು. ಈ ನಡೆಯನ್ನು ತೋರಿದಂತ ಚಾಲಕ ಕಂ ಕಂಡಕ್ಟರ್ ಅಮಾನತುಗೊಳಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದೇಶಿಸಿದೆ.
ಈ ಸಂಬಂಧ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಾಂಕ:28/04/2025 ರಂದು ಹಾನಗಲ್ ಘಟಕದ ಅನುಸೂಚಿ ಸಂಖ್ಯೆ : 7/8, ಹಾನಗಲ್ ದಿಂದ ವಿಶಾಲಗಡ ಮಾರ್ಗದ ಮೇಲೆ ವಾಹನ ಸಂಖ್ಯೆ ಕೆಎ-27, ಎಫ್-0914, ರಲ್ಲಿ ಚಾಲಕರಾಗಿ ಕರ್ತವ್ಯಕ್ಕೆ ನಿಯೋಜಿಸಿದ್ದು, ದಿನಾಂಕ:29/04/2025 ರಂದು ವಿಶಾಲಗಡ ದಿಂದ ಹಾನಗಲ್ ಮಾರ್ಗವಾಗಿ ವಾಹನವನ್ನು ಕಾರ್ಯಾಚರಣೆ ಮಾಡುತ್ತಿರುವ ಸಮಯದಲ್ಲಿ ನೀವು ಸಮಯ 17:30 ಘಂಟೆಗೆ ಸುಮಾರಿಗೆ ವಾಹನವನ್ನು ಹುಬ್ಬಳ್ಳಿಯ ಹೊರ ಭಾಗದಲ್ಲಿನ ಗಟ್ಟೂರು ಕ್ರಾಸ್‌ನಿಂದ ಸ್ವಲ್ಪ ಮುಂದೆ ವಾಹನವನ್ನು ರಸ್ತೆಯ ಎಡಬದಿಗೆ ಹಾಕಿ, ವಾಹನವನ್ನು ಬಂದ್ ಮಾಡಿ, ಹ್ಯಾಂಡ್ ಬ್ರೇಕ್ ಹಾಕಿ, ಚಾಲಕರ ಸೀಟಿನಿಂದ ಎದ್ದು, ಚಾಲಕರ ಸೀಟಿನ್ ಹಿಂದೆ ಇರುವ ಮೂರರ (1,2,3) ಆಸನದಲ್ಲಿ ‘ನಮಾಜ'(ಪ್ರಾರ್ಥನೆ) ಮಾಡಿರುತ್ತೀರಿ ಎಂದಿದೆ.
ನೀವು ಈ ರೀತಿ ಸಂಸ್ಥೆಯ ಸಾರ್ವಜನಿಕ ಸೇವೆಯಲ್ಲಿರುವಾಗ ಮಾರ್ಗ ಮದ್ಯದಲ್ಲಿ ಬಸ್ ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಕರು ಇದ್ದಾಗಲೂ ಸಹ ಧಾರ್ಮಿಕ ಆಚರಣೆ ಮಾಡಿ ಕರ್ತವ್ಯ ಲೋಪ ಎಸಗಿರುತ್ತೀರಿ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮತ್ತು ದೃಶ್ಯ ಮಾದ್ಯಮಗಳಲ್ಲಿ ವಿಷಯ ಭಿತ್ತರವಾಗಿ ಸಾರ್ವಜನಿಕರ ವಯಲದಲ್ಲಿ ಚರ್ಚೆಗೆ ಗ್ರಾಸವಾಗಲು ಮತ್ತು ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾಗಿರುತ್ತೀರಿ ಎಂದು ತಿಳಿಸಿದೆ.
ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ಇವರು ಕ.ರಾ.ರ.ಸಾ.ಸಂಸ್ಥೆಯ ಶಿಸ್ತು ಮತ್ತು ನಡತೆಗಳ ನಿಯಮಾವಳಿ 1971ರ ಭಾಗ-2 ಖಂಡಿಕೆ 3 ರಲ್ಲಿನ ಉಪ ಕಂಡಿಕೆ 1 ರಲ್ಲಿನ (ಎ) (ಬಿ) ಮತ್ತು (ಸಿ) ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಮೇಲೆ ನಮೂದಿಸಿದ ವರದಿಯಿಂದ ತಿಳಿಯುತ್ತದೆ. ಸದರಿಯವರು ಕೆಲಸದ ಮೇಲೆ ಇರುವುದರಿಂದ ಈ ಪ್ರಕರಣದ ತನಿಖೆಗೆ ಭಾದಕವಾಗಬಹುದೆಂದು, ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ಇವರನ್ನು ಅಮಾನತ್ತಗೊಳಿಸಬೇಕೆಂದು ಅಭಿಪ್ರಾಯಪಟ್ಟು ಈ ಕೆಳಗಿನಂತೆ ಆದೇಶಿಸಿದ್ದಾರೆ.
ಕ.ರಾ.ರ.ಸಾ.ಸಂಸ್ಥೆ ನೌಕರರ ನಡತೆ ಮತ್ತು ಶಿಸ್ತು ನಿಯಮಾವಳಿ-1971 ರ ನಿಯಮ 21(1) ಮತ್ತು ಕ.ರಾ.ರ.ಸಾ.ಸಂಸ್ಥೆಯ ಸುತ್ತೋಲೆ ಸಂ:ಕರಾಸಾ/ಕೇಕ/ಶಿಸ್ತು/959 ದಿನಾಂಕ:22/10/1999 ರ ಮೇರೆಗೆ ಪ್ರದತ್ತವಾದ ಅಧಿಕಾರದನ್ವಯ ನಡತೆ ಮತ್ತು ಶಿಸ್ತು ನಿಯಮ 21(1) ರಡಿಯಲ್ಲಿ ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ವಿಚಾರಣೆ ಬಾಕಿ ಇಟ್ಟು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಸದರಿಯವರಿಗೆ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ವಹಿಸಿದ ಕೆಲಸ ಮಾಡಿದ ಪೂರ್ಣಾವಧಿಗೆ (ದಿನದ ಭತ್ಯೆ ಹಾಗೂ ಇತರ ಭತ್ಯೆ ಬಿಟ್ಟು ಪಡೆಯಬಹುದಾದ ಒಟ್ಟು ವೇತನದ ಶೇಕಡ 50 ಕ್ಕೆ ಸರಿಯಾಗುವಷ್ಟು ಮೊತ್ತವನ್ನು ನೀಡಲಾಗುವುದು. ಸದರಿಯವರು ತಮ್ಮ ಅಮಾನತ್ತಿನ ಅವಧಿಯಲ್ಲಿ ಯಾವುದೇ ತರಹದ ನೌಕರಿ, ವ್ಯಾಪಾರ, ಉದ್ಯೋಗ ಹಾಗೂ ವಿರಾಮ ಕಾಲದ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂದು ಘೋಷಣೆ ಪತ್ರ ಸಹಿ ಮಾಡಿ ಕೊಟ್ಟಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗುತ್ತಾರೆ.
ಸದರಿಯವರು ಶಿಸ್ತುಪಾಲನಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೇ ಕಾರ್ಯಕ್ಷೇತ್ರವನ್ನು ತೊರೆದು ಹೊರಗೆ ಹೋಗಬಾರದು. ಸದರಿಯವರು ತಮ್ಮ ಸರಿಯಾದ ಅಂಚೆ ವಿಳಾಸವನ್ನು ತಿಳಿಸಬೇಕು. ಇಲ್ಲದೇ ಹೋದಲ್ಲಿ ಈ ಕಛೇರಿಯ ದಾಖಲಾತಿಯಲ್ಲಿ ಇರುವ ವಿಳಾಸಕ್ಕೆ ತಿಳುವಳಿಕೆ ಪತ್ರ ಹಾಗೂ ಇತರ ಕಾಗದ ಪತ್ರವನ್ನು ಕಳಿಸಲಾಗುವುದು. ಅಂತಹ ಅಂಚೆಗಳು ಬಟವಡೆಯಾಗದಿದ್ದಲ್ಲಿ ಅಂತಹ ವಿಳಾಸದಾರರು ಇಲ್ಲ ಅಥವಾ ಬಟವಾಡೆ ವೇಳೆಯಲ್ಲಿ ಸಿಗುವುದಿಲ್ಲ ಎಂಬ ಅಂಚೆ ಶರಾಗಳೊಂದಿಗೆ ಪರತ್ ಬಂದರೂ ಸಹ ಸದರಿಯವರಿಗೆ ಸಕಲ ಉದ್ದೇಶಗಳಿಗಾಗಿ ಆ ಪತ್ರಗಳು ಮುಟ್ಟಿರುತ್ತವೆ ಎಂದು ಪರಿಗಣಿಸಲಾಗುವುದು. ಈ ರೀತಿ ಜಾರಿಯಾಗದೇ ಇರುವ ಪತ್ರಗಳು ಜಾರಿಯಾದ ಪತ್ರಗಳೆಂದೇ ಪರಿಗಣಿಸಲ್ಪಡುವುದರಿಂದ ವಿಚಾರಣೆಯನ್ನು ಮುಂದುವರೆಸಲು ಹಾಗೂ ಶಿಸ್ತಿನ ಕ್ರಮವನ್ನು ಜರುಗಿಸಲು ಅವು ಪ್ರತಿಬಂಧಕವಾಗಲಾರವು ಎಂದು ತಿಳಿಸಿದ್ದಾರೆ.
BREAKING: ನಾನು ಮಾಜಿ ಸಂಸದ ಡಿ.ಕೆ ಸುರೇಶ್ ಪತ್ನಿ ಎಂಬುದಾಗಿ ವೀಡಿಯೋ ಹರಿಬಿಟ್ಟ ಮಹಿಳೆ ಅರೆಸ್ಟ್