ರಾಯಚೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.ಬಿ. ವೈ. ರಾಘವೇಂದ್ರ ಪುತ್ರನ ವಿವಾಹ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಿದರು.
ರಾಯರ ಭಕ್ತರಾಗಿರುವ ಬಿ. ಎಸ್. ಯಡಿಯೂರಪ್ಪ ಹಾಗೂ ಪುತ್ರ ಸಂಸದ ಬಿ. ವೈ. ರಾಘವೇಂದ್ರ ದಂಪತಿ ಹಾಗೂ ಕುಟುಂಬಸ್ಥರು ಮಠಕ್ಕೆ ಭೇಟಿ ನೀಡಿದ್ದರು. ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಮಠದ ಶಿಷ್ಠಾಚಾರದಂತೆ ಬಿ.ಎಸ್. ಯಡಿಯೂರಪ್ಪನವರನ್ನು ಬರ ಮಾಡಿಕೊಂಡರು. ಆರಂಭದಲ್ಲಿ ಗ್ರಾಮದ ಆದಿ ದೇವಿ ಶ್ರೀಮಾಂಚಲಮ್ಮ ದೇವಿ ದರ್ಶನ ಪಡೆದುಕೊಂಡರು.
ಬಳಿಕ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದುಕೊಂಡು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ಶ್ರೀಗಳು ಸನ್ಮಾನಿಸಿದರು. ನಂತರ ಶ್ರೀಮಠದ ಬಿ.ಎಸ್. ಯಡಿಯೂರಪ್ಪನವರಿಗೆ ಸನ್ಮಾನಿಸಿ ಗೌರವಿಸಿ, ಮಂತ್ರಾಕ್ಷತೆಯನ್ನು ನೀಡಿ, ಆಶೀರ್ವದಿಸಿದರು.
ಈ ವೇಳೆ ಮಗ ಬಿ. ವೈ. ರಾಘವೇಂದ್ರ ಹಾಗೂ ಪತ್ನಿ, ಕುಟುಂಸ್ಥರ ಇದ್ದರು.ಬಿ. ವೈ. ರಾಘವೇಂದ್ರ ಪುತ್ರನ ವಿವಾಹ ಹಿನ್ನೆಲೆ ಶ್ರೀಗಳಿಗೆ ಲಗ್ನಪತ್ರವನ್ನು ನೀಡಿ ಆಹ್ವಾನಿಸಲು ಆಗಮಿಸಿದರು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.