ಶ್ರೀನಗರ : ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಯೋತ್ಪಾದಕರಿಗೆ ನೆರವು ನೀಡಿದ್ದ ಸುಮಾರು 80 ಜನರನ್ನು ಇದೀಗ NIA ಅರೆಸ್ಟ್ ಮಾಡಿದೆ. ಅಜ್ಞಾತ ಸ್ಥಳದಲ್ಲಿ 80 ಜನರ ನಿರಂತರ ವಿಚಾರಣೆ ನಡೆಯುತ್ತಿದ್ದು, 80 ಓವರ್ ಗ್ರೌಂಡ್ ವರ್ಕರ್ಸ್ (OGW) ಅನ್ನು ಇದೀಗ NIA ಬಂಧಿಸಿದೆ.
ಇದುವರೆಗೂ NIA 2500ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದು, 186 ಶಂಕಿತರನ್ನು ಇಟ್ಟುಕೊಂಡಿದ್ದು, ಉಳಿದವರನ್ನು NIA ಬಿಟ್ಟುಕಳುಹಿಸಿದೆ ತಿಳಿದು ಬಂದಿದೆ. ಇನ್ನು ಬೈಯರನ್ ವಾಲಿಗೆ ಇದೀಗ NIA ಡಿಜಿ ಸದಾನಂದ ಅವರು ಭೇಟಿ ನೀಡಿದ್ದು, ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಉಗರು ದಾಳಿ ನಡೆಸಿದ ಜಾಗದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.