ಬೆಂಗಳೂರು : ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡಿದ ವಿಚಾರವಾಗಿ ಬಿಜೆಪಿಯವರು ಜವಾಹರಲಾಲ್ ನೆಹರೂ ಮಾಡಿದ ತಪ್ಪಿನಿಂದಾಗಿ ಇಂದು ದೇಶ ಕಷ್ಟ ಅನುಭವಿಸುತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರು ತಿರುಗೇಟು ಮಾಡಿದ್ದು ನೆಹರು ಅವರ ಹೆಸರಿನಲ್ಲಿ ಈಗ ಟೀಕೆ ಮಾಡುವವರು ಅಂದು ಹುಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಅಭಿವೃದ್ಧಿ ಕಾರ್ಯಗಳ ಮೇಲೆ ನಂಬಿಕೆ ಇಟ್ಟವನು. ಸುಳಿವು ನೀಡದೆ 371 ಜೆ ವಿಶೇಷ ಸ್ಥಾನಮಾನ ಜಾರಿ ಮಾಡಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 371 ಜೆ ವಿಶೇಷ ಸ್ಥಾನಮಾನ ಜಾರಿ ಮಾಡಿದ್ದೇನೆ.ನೆಹರು ಹೆಸರಿನಲ್ಲಿ ಈಗ ಟೀಕೆ ಮಾಡುವವರು ಅಂದು ಹುಟ್ಟಿರಲಿಲ್ಲ. ಅಂದು ದೇಶ ಯಾವ ಸ್ಥಿತಿಯಲ್ಲಿತ್ತು ಅಂತ ಅವರಿಗೆ ಗೊತ್ತಿಲ್ಲ. ಆರ್ ಎಸ್ ಎಸ್ ಮತ್ತು ಬಿಜೆಪಿ ಮೀಸಲಾತಿಗೆ ವಿರೋಧಿಯಾಗಿತ್ತು.
ಇನ್ನು ಪಹಲ್ಗಾಮ್ ದಾಳಿಯ ವಿಚಾರವಾಗಿ ಮಾತನಾಡಿದ ಅವರು, ದಾಳಿ ಕುರಿತಂತೆ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿದ್ದೆ. ಕೇಳೋದು ನಮ್ಮ ಧರ್ಮ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು. ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ಸಂಪುಟ ಸಭೆಯಲ್ಲಾದರೂ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಿಸಬೇಕು. ವಿಶೇಷ ಅಧಿವೇಶನ ಕರೆಯಬೇಕೆಂದು ಎಲ್ಲ ಪಕ್ಷಗಳ ಒತ್ತಾಯವಾಗಿದೆ. ವಿಶೇಷ ಅಧಿವೇಶನ ನಡೆಸಿದರೆ ಸಮಗ್ರವಾಗಿ ಚರ್ಚೆ ಮಾಡಬಹುದು. ಉಗ್ರ ದಾಳಿಯ ಬಗ್ಗೆ ಸಮಗ್ರವಾಗಿ ಚರ್ಚಿಸಬಹುದು ಎಂದು ಬೆಂಗಳೂರಿನಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.