ಶ್ರೀನಗರ : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎನ್ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು ತನಿಖೆಯ ವೇಳೆ ಮತ್ತೊಂದು ಸ್ಫೋಟಕವಾದ ಮಾಹಿತಿ ಬಹಿರಂಗವಾಗಿದ್ದು, ಪಹಲ್ಗಾಮ್ ನಲ್ಲಿ ಉಗ್ರರು ದಾಳಿಗೂ ಮೊದಲೇ ಒಂದು ವಾರ ಮೊದಲೇ ಠಿಕಾಣಿ ಹೂಡಿದ್ದರು ಎನ್ನುವುದು ಬಹಿರಂಗವಾಗಿದೆ.
ಹೌದು ದಾಳಿಗೂ ಒಂದು ವಾರ ಮೊದಲೇ ಉಗ್ರರು ಎಂಟ್ರಿ ಕೊಟ್ಟಿದ್ದಾರೆ. ಏಪ್ರಿಲ್ 15 ರಂದು ಜಮ್ಮು ಕಾಶ್ಮೀರದಲ್ಲಿ ಉಗ್ರರು ಠಿಕಾಣಿ ಹೂಡಿದ್ದಾರೆ. ಬೈಸರನ್ ವ್ಯಾಲಿ, ಅರುವ್ಯಾಲಿ, ಬೇತಾಬ್ ವ್ಯಾಲಿ ಹಾಗು ಲೋಕಲ್ ಅಮ್ಯೂಸ್ ಮೆಂಟ್ ಪಾರ್ಕ್ ಈ 4 ಸ್ಥಳಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದರು. 4 ಸ್ಥಳಗಳಲ್ಲಿ ಉಗ್ರರು ಖತರ್ನಾಕ್ ಸಂಚು ಇದೀಗ ಬಯಲಾಗಿದೆ.
ದಾಳಿಗೆ ನಾಲ್ಕು ಸ್ಥಳಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದರು ಎನ್ನಲಾಗಿದ್ದು, ಇದೀಗ NIA ತನಿಖೆಯಲ್ಲಿ ಮಾಹಿತಿ ಬಹುರಂಗವಾಗಿದೆ. ನಾಲ್ಕು ಪ್ರವಾಸಿ ತಾಣಗಳ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಭದ್ರತೆ ಕಡಿಮೆ ಇದಿದ್ದರಿಂದ ಉಗ್ರರು ದಾಳಿ ಮಾಡಲು ಸ್ಕೆಚ್ ಹಾಕಿದ್ದಾರೆ. ಈ ವೇಳೆ ಪಹಲ್ಗಾಮ್ ಗೆ ಎಂಟ್ರಿ ಕೊಟ್ಟು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಏಪ್ರಿಲ್ 22ರಂದು 26 ಅಮಾಯಕ ರನ್ನು ಭೀಕರವಾಗಿ ಹತ್ಯೆಗೈದಿದ್ದಾರೆ.
ಇದುವರೆಗೂ NIA 2500ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದೆ. ಉಗ್ರರು ಮೂರು ಸ್ಥಳ ಬಿಟ್ಟು ಪಹಲಗಾಂ ಟಾರ್ಗೆಟ್ ಮಾಡಿದ್ದಾರೆ. ಪ್ರವಾಸಿಗರು ಹೆಚ್ಚು ಭೇಟಿ ನೀಡಿದ್ದು, ಉಳಿದ ಸ್ಥಳಗಳಲ್ಲಿ ಪ್ರವಾಸಿಗರು ಕಡಿಮೆ ಇದ್ದಿದ್ದರಿಂದ ಪಹಲ್ಗಾಮ್ ಮೇಲೆ ದಾಳಿ ನಡೆಸಿದ್ದಾರೆ ಎಂದು ತನಿಖೆಯ ವೇಳೆ ಮಾಹಿತಿ ಬಹಿರಂಗವಾಗಿದೆ.