ಬೆಂಗಳೂರು : ಈಗಾಗಲೇ ಮಧ್ಯದ ಮೇಲಿನ ದರ ಎರಡು ಬಾರಿ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಮೂರನೇ ಬಾರಿಗೆ ಮಧ್ಯದರ ಏರಿಕೆ ಮಾಡಿದ್ದು ಮಧ್ಯಪ್ರಿಯರಿಗೆ ರಜೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ.ಹೌದು ಮದ್ಯ ಪ್ರಿಯರಿಗೆ ಮತ್ತೊಮ್ಮೆ ನೀಡಲು ಮುಂದಾದ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, 195% ನಿಂದ 205% ಗೆ ಸುಂಕ ಹೆಚ್ಚಿಸುವ ಬಗ್ಗೆ ಕರುಡು ಅಧಿಸೂಚನೆ ಪ್ರಕಟಿಸಲಾಗಿದೆ.
ಇನ್ನು ಈ ಕುರಿತು ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ. ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಇದೀಗ ಮದ್ಯದ ದರ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.ಈಗಾಗಲೇ ಡೀಸೆಲ್ ಹಾಲು ಮತ್ತು ವಿದ್ಯುತ್ ದರವನ್ನು ಸರ್ಕಾರ ಹೆಚ್ಚಿಸಿದೆ. ಬ್ರಾಂಡಿ, ವಿಸ್ಕಿ, ರಂ ಜಿನ್ ಗಳ ದರವನ್ನು ಪ್ರತೀ ಕ್ವಾಟರ್ ಗೆ 10 ರೂ.ಇಂದ 15 ರೂಪಾಯಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.ಬಿಯರ್ ದರ 10 ರೂ. ಇಂದ 20 ರೂ ವರೆಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಇನ್ನು ಆಲ್ಕೋಹಾಲ್ ಹೆಚ್ಚಿರುವ ಬಿಯರ್ ಮೇಲೆ ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಹೈ ಅಂಡ್ ಅಥವಾ ಪ್ರೀಮಿಯಂ ಮದ್ಯದ ದರ ಹೆಚ್ಚಿಸಲು ನಿರ್ಧಾರಿಸಿದ್ದು, ರಾಜ್ಯ ಸರ್ಕಾರದಿಂದ ಮೂರನೇ ಬಾರಿಗೆ ಮದ್ಯದ ದರ ಏರಿಕೆಗೆ ನಿರ್ಧರಿಸಲಾಗಿದೆ. 40,000 ಕೋಟಿ ಆದಾಯದಕ್ಕಾಗಿ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.