ಲಾಹೋರ್ : ಪಾಕಿಸ್ತಾನದ ಕರಾಳ ಮುಖ ಇದೀಗ ಮತ್ತೊಮ್ಮೆ ಬಯಲಾಗಿದ್ದು, ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಗು ಲಷ್ಕರ್ ಸಂಘಟನೆಯ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್ ಮನೆಗೆ ಇದೀಗ ಪಾಕಿಸ್ತಾನ ಸೇನೆಯೇ ಬಿಗಿ ಭದ್ರತೆ ಒದಗಿಸಿದೆ. ಉಗ್ರರನ್ನು ನಾವು ಸಾಕುತ್ತಿಲ್ಲ ಎಂದು ಇತ್ತೀಚಿಗೆ ಪಾಕಿಸ್ತಾನ ಅಧಿಕಾರಿಯೊಬ್ಬ ಹೇಳಿದ್ದ ಇದೀಗ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ಬಟಾ ಬಯಲಾಗಿದೆ.
ಉಪಗ್ರಹಗಳ ಚಿತ್ರಗಳ ಪ್ರಕಾರ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ತಿಳಿದುಬಂದಿದ್ದು, ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ಜೈಲಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಉಗ್ರ ಹಫೀಜ್ ಸಯೀದ್ ಜೈಲಲ್ಲಿ ಇಲ್ಲ ಲಾಹೋರ್ ನಲ್ಲಿ ತನ್ನ ಮನೆಯಲ್ಲಿ ಅಡಗಿ ಕುಳಿತಿದ್ದಾನೆ ಇದ್ದಾನೆ ಎಂದು ತಿಳಿದುಬಂದಿದೆ.
ಹಾಗಾಗಿ ಇದೀಗ ಆತನ ಮನೆಗೆ ಪಾಕಿಸ್ತಾನ ಸೇನೆಯೇ ಬಿಗಿ ಭದ್ರತೆ ನೀಡಿದೆ ಎಂದು ತಿಳಿದುಬಂದಿದೆ.ಆತನ ಮನೆಗೆ ಡ್ರೋನ್ ಗಳ ಮೂಲಕ ಪಾಕಿಸ್ತಾನ ಸೇನೆ ಬಿಗಿ ಭದ್ರತೆ ಮೂಲಕ ಕಣ್ಗಾವಲು ಇರಿಸಿದೆ. ಲಾಹೋರ್ ನಲ್ಲಿ ತನ್ನ ಮನೆಯಲ್ಲಿ ಅಡಗಿ ಕುಳಿತಿದ್ದಾನೆ ಎಂದು ಭಾರತೀಯ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿದೆ.