ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ವಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು 2021 ರನ್ನಯ ದಿನಾಂಕ:15.05.2025 ರೊಳಗೆ ಆಸ್ತಿಗಳಿಗೆ ಪಂಚತಂತ್ರ 20 ತಂತ್ರಾಂಶದಲ್ಲಿ ತೆರಿಗಯನ್ನು ವಿಧಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನಯ ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳನ್ನು ವಿಧಿಸಲು ಸ್ವಯಂಚಾಲಿತ ತೆರಿಗೆ ಲೆಕ್ಕಾಚಾರ ಮಾಡುವ ವಿಧಾನವನ್ನು ಸೆರೆಹಿಡಿಯಲು Automation of Property Tax ಮಾಡ್ಯುಲ್ ಅನ್ನು ಮತ್ತು ತೆರಿಗೆ ಸಂಗ್ರಹಣೆಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ, ಪಂಚತಂತ್ರ 20 ತಂತ್ರಾಂಶದಲ್ಲಿ ತೆರಿಗೆ ಸಂಗ್ರಹಣೆ’ ಮಾಡ್ಯುಲ್ ನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರ ನಿಯಮ 21 ರಸ್ತೆಯ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿರುವ ಅವ್ಯವಹಾರಗಳನ್ನು ತಡೆಗಟ್ಟಿ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ತೆರಿಗೆ, ದರ ಮತ್ತು ಫೀಜುಗಳನ್ನು ಸಂಗ್ರಹಣೆ ಮಾಡಲು ನಮೂನೆ-3ರಲ್ಲಿ ನಿಗಧಿಪಡಿಸಿರುವ ಮ್ಯಾನ್ಯುಯಲ್ ರಶೀದಿಗಳನ್ನು ನೀಡುವ ಬದಲು ಡಿಜಿಟಲ್ ರಶೀದಿಗಳನ್ನು ಸೃಜಿಸಿ ಸಾರ್ವಜನಿಕರಿಗೆ ನೀಡಲು ವಂಚತಂತ್ರ 20 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅದರಂತೆ, ಕಳೆದ ಆರ್ಥಿಕ ವರ್ಷದಲ್ಲಿ ವಂಚತಂತ್ರ 2.0 ತಂತ್ರಾಂಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನಯ 2024-25 ನೇ ಸಾಲಿನಲ್ಲಿ ಪ್ರತಿಯೊಂದು ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ವಿಧಿಸಲಾಗಿದೆ.
ಇದರಿಂದಾಗಿ, ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆಯ 2024-25 ನೇ ಸಾಲಿನ ಬೇಡಿಕೆಯು ರೂ.1600/- ಕೋಟಿಗೆ ತಲುಪಿದೆ ಹಾಗೂ ಸಾರ್ವಜನಿಕರು ಆನ್-ಲೈನ್ ಮೂಲಕ ತೆರಿಗೆ ಪಾವತಿಸುವಲ್ಲಿ ಸಹಕಾರಿಯಾಗಿದೆ.
ಆದರೇ, ಕೆಲವೊಂದು ಗ್ರಾಮ ಪಂಚಾಯತಿಗಳು ಒಂದೇ ಆಸ್ತಿಗೆ ಹಲವಾರು ಬಾರಿ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ಬದಲಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೆರಿಗೆ ಪಾವತಿಸಲು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ, ಒಂದು ಬಾರಿ ಆಸ್ತಿ ಮಾಲೀಕರು ಅಯಾ ವರ್ಷದ ತೆರಿಗೆಯನ್ನು ಪಾವತಿಸಿದ ನಂತರ ಆಯಾ ಆರ್ಥಿಕ ಸಾಲಿನಲ್ಲಿ ಮತ್ತೊಮ್ಮೆ ಸದರಿ ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷಿಯಗೊಳಿಸಲಾಗಿದೆ.
ಪ್ರಸ್ತುತ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ವಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನಯ ಆರ್ಥಿಕ ವರ್ಷದ ಪ್ರಾರಂಭದ ಮೂರು
ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆಯನ್ನು ಪಾವತಿಸುವವರಿಗೆ ಶೇ.5 ರಷ್ಟು ವಿನಾಯತಿಯನ್ನು ನೀಡಲಾಗಿದೆ.
ಅದುದರಿಂದ, ಪ್ರಸ್ತುತ ಸಾಲಿನ ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ತೆರಿಗೆ ವಿಧಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ನೀಡಲಾಗಿರುವ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ ದಿನಾಂಕ:15.05.2025 ರೊಳಗೆ ಬಳಕೆ ಮಾಡಲು ಅವಕಾಶವನ್ನು ನೀಡಲಾಗಿ ತದನಂತರ ಯಾವುದೇ ಆಸ್ತಿಗಳಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profil ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷ್ಕಯಗೊಳಿಸಲಾಗುವುದು.
ಅದರಂತೆ, ಪ್ರತಿ ಆರ್ಥಿಕ ವರ್ಷದ ಪ್ರಾರಂಭದ ಒಂದು ತಿಂಗಳ ಒಳಗಾಗಿ ಅಂದರೆ 30ನೆ ಏಪ್ರಿಲ್ ರೊಳಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ, ಪಂಚತಂತ್ರ 2 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profile ಅನ್ನು ಅವಕಾಶವನ್ನು ನೀಡಲಾಗಿದೆ.