ಬೆಂಗಳೂರು: ಸಾಮಾಜಿಕ ಜಾಲತಾಣವನ್ನು ಹಲವು ಮಂದಿ ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಇತ್ತೀಚಿಗೆ ಕೆಲವು ಮಂದಿ ಅನೇಕ ಮಾಹಿತಿಯನ್ನು, ಜಾಗವನ್ನು ವ್ಲಾಗ್ ಮಾಡಿ ಜನರ ಮುಂದೆ ಪರಿಚಯ ಮಾಡುತ್ತಿದ್ದಾರೆ ಕೂಡ.
ಆದರೆ ಕೆಲವು ಮಂದಿ ಕನ್ನಡ Food Vloggers ಕೆಲವು ಹೋಟೆಲ್‌ಗಳಿಗೆ ತೆರಳಿ ಹಣ ಪಡೆದುಕೊಂಡು ಪ್ರಮೊಶನ್ ನೆಪದಲ್ಲಿ ಜನರಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹಣಕ್ಕಾಗಿ ಕನ್ನಡ Food Vloggersಗಳು ಹೀಗೆ ಸುಳ್ಳು ಹೇಳುತ್ತಿರುವುದು ಅನೇಕ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿ ಹೇಳುವ ರೀತಿಯಲ್ಲಿ ಹೋಟೆಲ್‌ಗಳಲ್ಲಿ ನಾವು ಭೇಟಿ ನೀಡಿದ ವೇಳೆಯಲ್ಲಿ ರುಚಿಯಾಗಲಿ, ಶುಚಿಯಾಗಲಿ ಇರುವುದಿಲ್ಲ, ಆ ಸಮಯದಲ್ಲಿ ಅವರುಗಳು ಅವರಿಗೆ ಬೇಕಾದ ರೀತಿಯಲ್ಲಿ ವಿಡಿಯೋ ಮಾಡುತ್ತಾರೆ ಎನ್ನಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಹೋಟೆಲ್ ಮಾಲೀಕರ ಬಳಿ ಹಣಕ್ಕಾಗಿ ಡಿಮ್ಯಾಂಡ್ ಕೂಡ ಇಡುತ್ತಾರೆ. ಇದಲ್ಲದೇ ಹಣ ನೀಡದೇ ಹೋದರೆ ಹೋಟೆಲ್ ಬಗ್ಗೆ ಕೆಲವು ಮಂದಿ ನೆಗೆಟಿವ್ ರಿಪೋರ್ಟ್ ಮಾಡುತ್ತಾರೆ ಎನ್ನಲಾಗಿದೆ. ಅದರಲ್ಲೂ ಕೆಲವು ಮಂದಿ ಕಾಸಿಗಾಗಿ ವ್ಯಾಲ್ಗ್ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಈ ಬೆಳವಣಿಗೆ ಒಳ್ಳೆಯದು ಅಲ್ಲ ಎನ್ನುತ್ತಾರೆ ಹಲವು ಮಂದಿ.