ರಾಯಚೂರು : ಕೋರ್ಟ್ನಲ್ಲಿ ಪೋಕ್ಸೋ ಪ್ರಕರಣದ ವಿಚಾರಣೆಯ ವೇಳೆ ಮರ್ಯಾದ ಹತ್ಯೆ ಬೆಳಕಿಗೆ ಬಂದಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ತಂದೆಯೇ ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳನ್ನು ತಂದೆ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿದ್ದ ಘಟನೆ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿತ್ತು.
ಪುತ್ರಿ ರೇಣುಕಾ (18) ಕೊಲೆ ಮಾಡಿದ್ದ ತಂದೆ ಲಕ್ಕಪ್ಪ ಕಂಬಳಿ. 2024 ಸೆಪ್ಟೆಂಬರ್ 21ರನ್ನು ಮಗಳನ್ನು ಕೊಲೆ ಮಾಡಿ ಲಕ್ಕಪ್ಪ ಶವವನ್ನು ಕೃಷ್ಣಾ ನದಿಗೆ ಎಸೆದಿದ್ದ ಮಗಳ ಶವವನ್ನು ಮೂಟೆ ಕಟ್ಟಿ ನದಿಗೆ ಎಸೆದಿದ್ದ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸುತ್ತಿದ್ದಳು. ಮದುವೆಗೆ ವಿರೋಧ ಮಾಡಿದ್ದಕ್ಕೆ ಇಬ್ಬರು ಗ್ರಾಮವನ್ನು ಬಿಟ್ಟು ಓಡಿ ಹೋಗಿದ್ದರು.
ಮಗಳು 17 ವರ್ಷದವಳಾಗಿದ್ದರಿಂದ ತಂದೆ ಲಕ್ಕಪ್ಪ ಠಾಣೆಗೆ ದೂರು ನೀಡಿದ್ದರು. ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣದ ಅಡಿ ತಂದೆ ದೂರು ನೀಡಿದರು. ಪೋಕ್ಸೋ ಪ್ರಕರಣದ ಅಡಿ ಹನುಮಂತನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಆದರೆ ರೇಣುಕಾ ಮಾತ್ರ ಹನುಮಂತನ ಮದುವೆ ಆಗುತ್ತೇನೆ ಎಂದು ಪಟ್ಟು ಹಿಡಿದಿದ್ದಳು. ನಂತರ ಜಾಮೀನು ಮೇಲೆ ಹನುಮಂತ ಹೊರಬಂದಿದ್ದೆ ರೇಣುಕಾ ಆತನ ಜೊತೆ ಓಡಾಟ ನಡೆಸಿದ್ದಾಳೆ.
ಎಷ್ಟೇ ಬುದ್ಧಿವಾದ ಹೇಳಿದರೂ ಕೂಡ ರೇಣುಕಾ ಹನುಮಂತನನೇ ಮದುವೆ ಆಗುವೆ ಎಂದು ಹಠ ಹಿಡಿದಿದ್ದಾಳೆ, ಇದರಿಂದ ಲಕ್ಕಪ್ಪ ಮಗಳನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಹೊಲದಲ್ಲಿ ಮಗಳನ್ನು ಕೊಲೆ ಮಾಡಿ ನದಿಗೆ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.ಕೋರ್ಟ್ ನಲ್ಲಿ ಹೋಗ್ಸೋ ಪ್ರಕರಣದ ವಿಚಾರಣೆಯ ವೇಳೆ ಲಕ್ಕಪ್ಪ ತಪ್ಪು ಒಪ್ಪಿಕೊಂಡಿದ್ದಾನೆ. ವಿಚಾರಣೆಗೆ ಹಲವು ಬಾರಿ ಪುತ್ರಿ ಗೈರಾದ ಬಗ್ಗೆ ಕೋರ್ಟ್ ಪ್ರಶ್ನೆ ಮಾಡಿತ್ತು. ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿತ್ತು. ಈ ವೇಳೆ ಲಕ್ಕಪ್ಪತನ ಮಗಳನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.