ಚಾಮರಾಜನಗರ : ಮಹಿಳಾ ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಮದ್ಯದಲ್ಲಿ ಡೊಮ್ಯಾಕ್ಸ್ ಮಿಕ್ಸ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲ ಠಾಣೆಯ ಪಿಎಸ್ಐ ವರ್ಷವಿರುದ್ದ ಈ ಒಂದು ಕಿರುಕುಳ ಆರೋಪ ಕೇಳಿ ಬಂದಿದೆ. ಪದೇ ಪದೇ ಠಾಣೆಗೆ ಕರೆಸುವುದು ಪಿಎಸ್ಐ ವರ್ಷ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಿವಾಸಿ ದುಷ್ಯಂತ ಎನ್ನುವ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಿನ್ನೆಯೂ ಕೂಡ ದುಷ್ಯಂತ ಮನೆಗೆ ಹೋಗಿ ಪಿಎಸ್ಐ ವರ್ಷ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಪಿ ಎಸ್ ಐ ವರ್ಷ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಣ ನೀಡದಿದ್ದರೆ ರೌಡಿ ಓಪನ್ ಮಾಡುವುದಾಗಿ ಪಿಎಸ್ಐ ವರ್ಷ ದಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಹಿಂದೆ ಯುವಕರ ಜೊತೆಗೆ ದೃಶ್ಯಂತ ಗಲಾಟೆ ಮಾಡಿಕೊಂಡಿದ್ದ. ಇದನ್ನೇ ಅಸ್ತ್ರ ಮಾಡಿಕೊಂಡು ದುಷ್ಯಂತಗೆ ನಿರಂತರವಾಗಿ ಪಿಎಸ್ಐ ವರ್ಷ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಮದ್ಯದ ಜೊತೆಗೆ ಡೊಮ್ಯಾಕ್ಸ್ ಕುಡಿದು ದುಷ್ಯಂತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ದುಷ್ಯಂತನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದುಷ್ಯಂತ ಆತ್ಮಹತ್ಯೆಗೆ ಯತ್ನ ಹಿನ್ನೆಲೆಯಲ್ಲಿ ಪಿಎಸ್ಐ ವರ್ಷ ಹೊಸ ಅಸ್ತ್ರ ಬಳಕೆ ಮಾಡಿದ್ದು, ಬಾರ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದ ವಿಡಿಯೋವನ್ನು ಹರಿಬಿಟ್ಟ ಆರೋಪ ಕೇಳಿ ಬಂದಿದೆ. ಏಪ್ರಿಲ್ 8 ರಂದು ಕುಡಿದ ಮತ್ತಿನಲ್ಲಿ ದುಷ್ಯಂತ ಬಾರ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದ. ಬಿಲ್ ವಿಚಾರಕ್ಕೆ ಕ್ಯಾಶಿಯರ್ ಮತ್ತು ದುಶ್ಯಂತ ನಡುವೆ ಗಲಾಟೆ ಆಗಿತ್ತು. ರಾಜಿ ಸಂಧಾನ ಕೂಡ ಆಗಿ ಯಾವುದೇ ದೂರು ದಾಖಲು ಆಗಿರಲಿಲ್ಲ. ಈಗ ಈ ವಿಡಿಯೋವನ್ನು ಪಿಎಸ್ಐ ವರ್ಷ ಹರಿಬಿಟ್ಟಿರುವ ಆರೋಪ ಕೇಳಿ ಬಂದಿದೆ. ಸದ್ಯ ಕೊಳ್ಳೇಗಾಲ ಠಾಣೆ ಬಿ ಎಸ್ ಐ ವರ್ಷ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ದುಶಾಂತ ಕುಟುಂಬಸ್ಥರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.