ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಿಂದ ಒಂದು ಮನಕಲಕುವ ವಿಡಿಯೋ ಹೊರಬಿದ್ದಿದ್ದು, ಕೆಳಗೆ ನಡೆಯುತ್ತಿರುವ ಮಾರಕ ಭಯೋತ್ಪಾದಕ ದಾಳಿಯ ಅರಿವಿಲ್ಲದೆ ಪ್ರವಾಸಿಗರೊಬ್ಬರು ಸುಂದರವಾದ ಭೂದೃಶ್ಯದಾದ್ಯಂತ ಶಾಂತವಾಗಿ ಜಿಪ್‌ಲೈನ್‌ನಲ್ಲಿ ಚಲಿಸುತ್ತಿರುವುದನ್ನು ತೋರಿಸುತ್ತಿದೆ. ಇದೀಗ ಜಿಪ್ ಲೈನ್ ಆಪರೇಟರ್ ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಉಗ್ರರ ದಾಳಿ ನಡೆಸುತ್ತಿರುವ ದೃಶ್ಯ ಪ್ರವಾಸಿಗನೊಬ್ಬ ಜಿಪ್ ಲೈನ್ ನಲ್ಲಿ ತೆರಳುವ ವೇಳೆ ಸೆಲ್ಫಿ ವಿಡಿಯೋದಲ್ಲಿ ಸೆರೆಯಾಗಿತ್ತು. ಉಗ್ರರ ದಾಳಿಯ ಮತ್ತೊಂದು ಭಯಾನಕ ವಿಡಿಯೋ ನಿನ್ನೆ ವೈರಲ್ ಆಗಿತ್ತು. ರಿಷಿ ಭಟ್ ಎನ್ನುವವರು ಜಿಪ್ ಲೈನ್ ಆಡುವ ವೇಳೆ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಪ್ರವಾಸಿಗರು ಕೆಳಗೆ ಕುಸಿದು ಬೀಳುತ್ತಿರುವ ದೃಶ್ಯ ಸೆರೆಯಾಗಿತ್ತು.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ಎನ್ಐಎ ಅಧಿಕಾರಿಗಳು ಜಿಪ್ ಲೈನ್ ಆಪರೇಟರ್ ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಉಗ್ರರು ಗುಂಡಿನ ದಾಳಿ ನಡೆಸುವ ವೇಳೆ ರಿಷಿ ಭಟ್ ಜಿಪ್ ಲೈನ್ ಏರಿದ್ದರು. ಈ ವೇಳೆ ಜಿಪ್ ಲೈನ್ ಆಪರೇಟರ್ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ NIA ಅಧಿಕಾರಿಗಳ ತಂಡ ಇದೀಗ ಜಿಪ್ ಲೈನ್ ಆಪರೇಟರ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳಿಂದ ಬಲ್ಲ ತಿಳಿದುಬಂದಿದೆ.
ರಿಷಿ ಭಟ್ ಹೇಳಿದ್ದೇನು?
ಏತನ್ಮಧ್ಯೆ, ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಇತರ ಪ್ರವಾಸಿಗರ ಮೇಲೆ ನಿರ್ದಯವಾಗಿ ಗುಂಡು ಹಾರಿಸುತ್ತಿದ್ದರು.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭಟ್, ತಮ್ಮ ಜಿಪ್‌ಲೈನ್ ಕೊನೆಯಲ್ಲಿ ಏನೋ ತಪ್ಪಾಗಿದೆ ಎಂದು ಅವರು ಅರಿತುಕೊಂಡರು ಎಂದು ಹೇಳಿದರು.
ನನ್ನ ಜಿಪ್‌ಲೈನ್ ಕೊನೆಯಲ್ಲಿ ಏನೋ ತಪ್ಪಾಗಿದೆ ಎಂದು ನನಗೆ ಅನಿಸಿತು. ನಾನು ಜಿಪ್‌ಲೈನ್ ನಿಲ್ಲಿಸಿದೆ. 15 ಅಡಿ ಎತ್ತರದಿಂದ ಜಿಗಿದು, ನನ್ನ ಹೆಂಡತಿ ಮತ್ತು ಮಗನೊಂದಿಗೆ ಓಡಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಜಿಪ್‌ಲೈನ್ ಆಪರೇಟರ್ “ಅಲ್ಲಾ ಹು ಅಕ್ಬರ್” ಎಂದು ಜಪಿಸಿದ ಕೂಡಲೇ ಗುಂಡು ಹಾರಾಟ ಪ್ರಾರಂಭವಾಯಿತು ಎಂದು ಭಟ್ ಬಹಿರಂಗಪಡಿಸಿದ್ದಾರೆ.
🚨 Another horrific footage surfaces from the Pahalgam terrorist attack.
A man from Ahmedabad recorded it unknowingly — unaware of the tragedy unfolding before his eyes 💔
— Avenge Pahalgam. pic.twitter.com/tgZAhPC7PZ
— Megh Updates 🚨™ (@MeghUpdates) April 28, 2025