ಶ್ರೀನಗರ : ಪಹಲ್ ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಭೀಕರ ಗುಂಡಿನ ದಾಳಿ ನಡೆಸಿದ ಪರಿಣಾಮ 26 ಜನ ಪ್ರವಾಸಿಗರು ಬಲಿಯಾಗಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಪ್ರವಾಸಿಗನೊಬ್ಬ ಜಿಪ್ ಲೈನ್ ಕ್ರಾಸ್ ಮಾಡುವಾಗಲೇ ಇನ್ನೊಬ್ಬ ಪ್ರವಾಸಿಗ ಕುಸಿದು ಬೀಳುತ್ತಿರುವ ಸರೆಯಾಗಿದೆ.
ಹೌದು ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ದಾಳಿಯ ಭೀಕರ ದೃಶ್ಯ ಸೆರೆಯಾಗಿದೆ. ಜಿಪ್ ಲೈನ್ ಕ್ರಾಸ್ ಮಾಡುತ್ತಿದ್ದ ಪ್ರವಾಸಿಗನ ಮೊಬೈಲ್ ನಲ್ಲಿ ಗುಡ್ಡದಲ್ಲಿ ಓಡುತ್ತಿರುವಾಗ ವ್ಯಕ್ತಿ ಕುಸಿದು ಬಿದ್ದ ದೃಶ್ಯ ಸೆರೆಯಾಗಿದೆ.