ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಈಜುಕೊಳದ ಕಾಮಗಾರಿ ಪೂರ್ಣಗೊಂಡಿದ್ದು, ಮೇ.3ರಿಂದ ಬೇಸಿಗೆ ಈಜು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಸಾಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಗರ ತಾಲ್ಲೂಕಿನ ವಿಜಯನಗರದಲ್ಲಿರುವ ದುರಸ್ಥಿ ಕಾಮಗಾರಿ ಪೂರ್ಣಗೊಳಿಸಿದ್ದು, ದಿನಾಂಕ:01-05-2015ರಂದು ಬೆಳಿಗ್ಗೆ ಮಾನ್ಯ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ನವೀಕರಣಗೊಂಡ ಈಜುಕೊಳದ ಚಟುವಟಿಕೆಗಾಗಿ ಮನ: ಚಾಲನೆ ನೀಡಲಿದ್ದಾರೆ. ಅದರಂತೆ ಈ ಹಿಂದೆ ಸದಸ್ಯತ್ವ ಪಡದ ಹಾಗೂ ಹೊಸದಾಗಿ ಸದಸ್ಯತ್ವ ಪಡೆಯುವ ಸದಸ್ಯರು ಈಜುಕೊಳಕ್ಕೆ ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.
ಈ ಬಾರಿಯೂ ಸಹ ದಿನಾಂಕ:03-05-2025ರಿಂದ 25-05-2025ರವರೆಗೆ ಈಜುಕೊಳದಲ್ಲಿ ಬೇಸಿಗೆಯ ವಿಶೇಷ ಈಜು ತರಬೇತಿ ಶಿಬಿರವನ್ನು 5 ವರ್ಷ ಮೇಲ್ಪಟ್ಟವರಿಗೆ 21 ದಿನಗಳ ಆಯೋಜಿಸಲಾಗುತ್ತಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತರಬೇತಿ ನಡೆಸಲಾಗುತ್ತದೆ. ತರಬೇತಿ ಶುಲ್ಕವಾಗಿ ರೂ.1500/-ಗಳನ್ನು ನಿಗದಿಪಡಿಸಲಾಗಿದೆ. ತರಬೇತಿಗೆ ಪಾಲ್ಗೊಳ್ಳುವ ಆಸಕ್ತರು ತಕ್ಷಣದಲ್ಲಿ ಸಂಪರ್ಕಿಸಿ ತರಬೇತಿಯಲ್ಲಿ ಪಾಲ್ಗೊಳ್ಳಲು ಈ ಮೂಲಕ ತಿಳಿಸಲಾಗಿದೆ. ತರಬೇತಿಯ ಮಾಹಿತಿ ಹಾಗೂ ಮಾಸಿಕ, ವಾರ್ಷಿಕ ಸದಸ್ಯತ್ವ ಮಾಹಿತಿಗಾಗಿ 8073085412, 9731233184, 9008982197 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ: 7 ಮಂದಿ ಸಾವು, 16 ಜನರಿಗೆ ಗಾಯ | Blast in Pakistan South Waziristan
BIG NEWS : ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ.ದಂಡ : ‘BMRCL’ ಮಹತ್ವದ ಪ್ರಕಟಣೆ.!