ಉತ್ತರಕನ್ನಡ : ಮೋಸ್ಟ ವಾಂಟೆಡ್ ಕ್ರಿಮಿನಲ್ ಹಾಗೂ ಭಯೋತ್ಪಾದಕರ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾದ ಉತ್ತರ ಕನ್ನಡ ಜಿಲ್ಲೆಯ ಮೌಸಿನ್ ಶುಕುರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 1ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಆದೇಶ ನೀಡಿದೆ.
14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದ್ದು, ಉಳಿದ ಪ್ರಕರಣಗಳಲ್ಲಿ ಬಾಡಿ ವಾರೆಂಟ್ ಪಡೆಯಲು ಪೊಲೀಸರು ಸಜ್ಜಗಿದ್ದಾರೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಮೌಸಿನ್ ಶುಕುರ್ ಈತನ ವಿರುದ್ಧ ಉತ್ತರಕನ್ನಡ, ಬೆಂಗಳೂರು, ಮಂಗಳೂರಿನಲ್ಲಿ ಹಲವು ಕೇಸ್ಗಳಿವೆ ಭಯೋತ್ಪಾದಕ ಜೊತೆ ಮೋಸಿನ್ ಸಂಪರ್ಕ ಹೊಂದಿದ್ದ ಬಗ್ಗೆ ಮಾಹಿತಿ ಇದೆ.
ಹೀಗಾಗಿ ಮೌಸಿನ್ ಶುಕುರ್ ನನ್ನು ವಿಚಾರಣೆ ಮಾಡಲು ಪೊಲೀಸರು ಹಾಗೂ ಎನ್ಐಎ ತಂಡ ಮುಂದಾಗಿದೆ. ಅಲ್ಲದೇ ಆತನಿಗೆ ಆಶ್ರಯ ಕೊಟ್ಟು ಸುಳ್ಳು ಮಾಹಿತಿ ನೀಡಿದವರನ್ನು ಕೂಡ ಬಂಧನ ಮಾಡಲಾಗಿದೆ. ಮೌಸಿನ್ ತಾಯಿ ಮತ್ತು ನಾಲ್ವರು ಸಹೋದರ ಸಂಬಂಧಿಗಳನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಮೌಸಿನ್ ನನ್ನು ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಪೊಲೀಸರು ಶಿಫ್ಟ್ ಮಾಡಲಿದ್ದಾರೆ.