ನವದೆಹಲಿ : ಜಮ್ಮು ಕಾಶ್ಮೀರದ ಪಹಲ್ಗಾನ್ ನಲ್ಲಿ ನಡೆದ ಉಗ್ರರ ನರಮೇಧದಲ್ಲಿ ಇಬ್ಬರು ಕನ್ನಡಿಗರು ಸೇರಿ 22 ಜನ ಬಲಿಯಾಗಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ಆರಂಭಿಸಿದ್ದು ತನಿಖೆಯಲ್ಲಿ ಸ್ಫೋಟಕವಾದ ವಿಷಯ ಬಹಿರಂಗವಾಗಿದೆ.
ಹೌದು ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗೂಡಿನ ದಾಳಿ ನಡೆಸಿದರು ಈ ಒಂದು ಘಟನೆಗೆ ಸಂಬಂಧಿಸಿದಂತೆ ಎನ್ಐಎ ಇದೀಗ ತನಿಖೆ ಕೈಗೊಂಡಿದ್ದು ಉಗ್ರರ ಜೊತೆಗೆ ವಿದೇಶಿ ಉಗ್ರರೂ ಸಹ ಕೈಜೋಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಎನ್ಐಎ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದೆ.