ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ನಿವಾಸದಲ್ಲಿ 2 ಕೋಟಿ 25 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಶಾಸಕ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ನಡುವಿನ ಸಂಬಂಧದ ಕುರಿತು ರಹಸ್ಯ ಬಯಲಾಗಿದ್ದು, ED ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ವಿಚಾರ ಬಹಿರಂಗವಾಗಿದೆ.
ಹೌದು ಐಶ್ವರ್ಯಾ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಇಡಿ ಅಧಿಕಾರಿಗಳು ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ್ದು, ಸತತ 26 ಗಂಟೆ ದಾಳಿ ನಡೆಸಿ ಹಲವು ದಾಖಲೆಗಳ ಸಂಗ್ರಹಿಸಿದೆ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲೂ ಶಾಸಕ ವಿನಯ್ ಕುಲರ್ಣಿಗೆ ಸಹಾಯ ಮಾಡಿದ್ದಳು ಎನ್ನುವುದು ಗೊತ್ತಾಗಿದೆ.
ಐಶ್ವರ್ಯಾ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಇಡಿ ಅಧಿಕಾರಿಗಳು ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ್ದು, ಸತತ 26 ಗಂಟೆ ದಾಳಿ ನಡೆಸಿ ಹಲವು ದಾಖಲೆಗಳ ಸಂಗ್ರಹಿಸಿದೆ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲೂ ಶಾಸಕ ವಿನಯ್ ಕುಲರ್ಣಿಗೆ ಸಹಾಯ ಮಾಡಿದ್ದಳು ಎನ್ನುವುದು ಗೊತ್ತಾಗಿದೆ.
ಇಡಿ ವಿಚಾರಣೆ ವೇಳೆ ಯೋಗೇಶ್ ಗೌಡ ಕೊಲೆ ಪ್ರರಕರಣದ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡಿದ್ದು ಸಹ ಬಯಲಿಗೆ ಬಂದಿದೆ. ಪ್ರಕರಣದ ಮಾಫಿ ಸಾಕ್ಷಿಯಾಗಿದ್ದ ಮುತ್ತಗಿಗೆ ಐಶ್ವರ್ಯಾ ಟ್ರ್ಯಾಪ್ ಮಾಡಿದ್ದಳು. ಐಶ್ವರ್ಯಾ ಹಾಗೂ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಸೇರಿಕೊಂಡು, ಬಸವರಾಜ್ ಮುತ್ತಗಿಗೆ ಕರೆ ಮಾಡಿ ಹಣದ ಆಮಿಷವೊಡ್ಡಿ ರೆಕಾರ್ಡ್ ಮಾಡಿಕೊಂಡಿದ್ದರು.ಬಳಿಕ ಹೈಕೋರ್ಟ್ನಲ್ಲಿ ಈ ಆಡಿಯೋ ನೀಡಿ ಸಾಕ್ಷಿ ರದ್ದು ಮಾಡಲು ಮುಂದಾಗಿದ್ದಳು. ಆದರೆ ಈ ಪ್ರಕರಣವನ್ನು ಸಿಬಿಐ ನ್ಯಾಯಾಲಯಕ್ಕೆ ನೀಡಿತ್ತು. ಹೀಗಾಗಿ ಮಾಫಿ ಸಾಕ್ಷಿ ರದ್ದಿಗೆ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಜಾಗೊಂಡಿತ್ತು.