ಗದಗ : ಗದಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಚಲಿಸುತ್ತಿದ್ದ ಕಾರಲ್ಲಿ ಏಕಾಏಕಿ ಮೆಟ್ ಕಾಣಿಸಿಕೊಂಡಿದೆ ಈ ವೇಳೆ ನಡು ರಸ್ತೆಯಲ್ಲಿಯೇ ಕಾರು ಧಗಧಗನೆ ಹೊತ್ತಿ ಉರಿದಿದೆ ಅದೃಷ್ಟವಶಾತ್ ಕಾರಿನಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.
ಈರಣ್ಣ ಜಾಲಿಹಾಳ ಅವರು ತಮ್ಮ ಕುಟುಂಬದವರೊಂದಿಗೆ ಕಾರಿನಲ್ಲಿ ಗದಗನಿಂದ ಹನುಮಸಾಗರಕ್ಕೆ ಹೊರಟಿದ್ದರು. ಕಾರು ಚಲಿಸುತ್ತಿರುವ ವೇಳೆ ಇಂಜಿನ್‌ನಲ್ಲಿ ಸ್ವಲ್ಪ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಈರಣ್ಣ ಮತ್ತು ಕುಟುಂಬಸ್ಥರು ಕಾರಿನಿಂದ ಹೊರಗಡೆ ಬಂದಿದ್ದಾರೆ.
ಎಲ್ಲರೂ ಕಾರಿನಿಂದ ಹೊರಗಡೆ ಬಂದ ತಕ್ಷಣ ನಡು ರಸ್ತೆಯಲ್ಲಿಯೇ ಕಾರು ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ. ಘಟನೆ ಕುರಿತಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







![ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ : ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ಯಾದಗಿರಿ ಲೋಕಾಯುಕ್ತ ದಾಳಿ ಇನ್ಸ್‌ಪೆಕ್ಟರ್ ಬಂಧನ [Yadgiri Lokayukta Raid Inspector Arrested], ಗುರುಮಠಕಲ್ ಪೊಲೀಸ್ ಭ್ರಷ್ಟಾಚಾರ ಪ್ರಕರಣ [Gurmitkal Police Corruption Case], ವೀರಣ್ಣ ದೊಡ್ಡಮನಿ ಲೋಕಾಯುಕ್ತ ಟ್ರ್ಯಾಪ್ [Veeranna Doddamani Lokayukta Trap]. ಟ್ಯಾಗ್ಸ್ (Tags)](https://kannadanewsnow.com/kannada/wp-content/uploads/2026/05/ಲಂಚ-ಪಡೆಯುವಾಗ-ಲೋಕಾಯುಕ್ತ-ಬಲೆಗೆ-ಬಿದ್ದ-ಗುರುಮಠಕಲ್-450x253.jpg)
