ನವದೆಹಲಿ : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಐವರು ಪಾಕಿಸ್ತಾನಿ ಉಗ್ರರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿ ಮೂವರು ಪಾಕಿಸ್ತಾನದವರಾದರೆ ಇನ್ನುಳಿದ ಇಬ್ಬರು ಜಮ್ಮು-ಕಾಶ್ಮೀರದವರು ಇದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಮೂಲದ ಆಸಿಫ್ ಹೌಜಿ, ಅಲಿಬಾಯ್ ಹಾಗು ಹಾಸಿಂ ಪಾಕಿಸ್ತಾನದವರಾದರೆ, ಉಳಿದಿಬ್ಬರು ಜಮ್ಮು ಕಾಶ್ಮೀರದ ಪುಲ್ವಾಮಾ ಮೂಲದ ಅಲ್ಸಾನ್ ಹಾಗು ಅನಂತನಾಗ್ ಜಿಲ್ಲೆಯ ಆದಿಲ್ ಹುಸೈನ್ ತೊಕರ್ ಎಂದು ತಿಳಿದುಬಂದಿದೆ. ಸದ್ಯ ಇವರು ಪೀರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಅಡಗಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.