ಶ್ರೀನಗರ : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜಮ್ಮು ಕಾಶ್ಮೀರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಭಯೋತ್ಪಾದಕರ ನಿವಾಸಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ.
ಹೌದು ಕಳೆದ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಉಗ್ರರ ದಾಳಿಯಲ್ಲಿ ಆದಿಲ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಆದಿಲ್ ಉಗ್ರ ತರಬೇತಿ ಪಡೆದಿದ್ದ. 2018 ರಲ್ಲಿ ಆದಿಲ್ ಪಾಕಿಸ್ತಾನಕ್ಕೆ ತೆರಳಿದ್ದ. ಇದೀಗ ಆತನ ಮನೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ಅದೇ ರೀತಿಯಾಗಿ ದಕ್ಷಿಣ ಕಾಶ್ಮೀರದಲ್ಲಿರುವ ಮತ್ತೋರ್ವ ಉಗ್ರ ಆಸಿಫ್ ಶೇಕ್ ನಿವಾಸವನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಲಷ್ಕರ್ ಉಗ್ರರಾದ ಆದಿಲ್ ಹಾಗು ಆಸಿಫ್ ಶೇಕ್ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಇರುವಂತಹ ಜಿಲ್ಲೆಯಲ್ಲಿ ಬಿಜ್ ಬೆಹರಾದಲ್ಲಿರುವ ಆದಿಲ್ ನಿವಾಸ ಧ್ವಂಸಗೊಳಿಸಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಈ ಇಬ್ಬರು ಉಗ್ರರು ಪ್ರಮುಖ ಪಾತ್ರ ವಹಿಸಿದ್ದರು.