ಬೆಳಗಾವಿ : ಬಡ್ಡಿ ವ್ಯವಹಾರಕ್ಕಾಗಿ ಇಬ್ಬರು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಮುಚ್ಚಂಡಿಯಲ್ಲಿ ನಡೆದಿದೆ. ಬಡ್ಡಿ ವ್ಯವಹಾರಕ್ಕಾಗಿ ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ಬಸವರಾಜ ಬಿರಾದಾರ್ ಹಾಗೂ ಜಗದೀಶ್ ಬಿರಾದಾರ್ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚೇತನ್ ಗುಡದೇವ್ವಗೋಳನಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಈ ಒಂದು ಗಲಾಟೆಯಲ್ಲಿ ಎರಡು ಕಡೆಯವರಿಗೂ ತಲೆಗೆ ಗಾಯಗಳಾಗಿವೆ. ಮೂರು ತಿಂಗಳ ಹಿಂದೆ ಬಸವರಾಜ್ ಚೇತನ್ ಎನ್ನುವ ವ್ಯಕ್ತಿಯ ಬಳಿ ಹಣ ಪಡೆದಿದ್ದ.
10 ಸಾವಿರ ಸಾಲ ಪಡೆದಿದ್ದ. ಬಡ್ಡಿ ಹಣ ಕೊಡಲಿಲ್ಲ ಎಂದು ಮಾರಕಾಸ್ತ್ರಗಳಿಂದ ಇದೀಗ ಹಲ್ಲೆ ನಡೆಸಿದ್ದಾರೆ. ಬಸವರಾಜ ಮತ್ತು ಜಗದೀಶ್ ತಲೆಗೆ ಗಂಭೀರವಾದ ಗಾಯಗಳಾಗಿವೆ. ಚೇತನ್ ಗುಡದೇವ್ವಗೋಳ ತಲೆಗೂ ಗಾಯಗಳಾಗಿದ್ದು ಎಲ್ಲರನ್ನೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.