ನವದೆಹಲಿ : ಭಾರತದಲ್ಲಿ ಅಬಿರ್ ಗುಲಾಲ್ ಚಿತ್ರ ಪ್ರದರ್ಶನಕ್ಕೆ ಇದೀಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅನುಮತಿ ನಿರಾಕರಿಸಿದೆ. ಪಾಕ್ ನಟ ಫವಾದ್ ಖಾನ್ ನಟಿಸಿರುವ ಅಬಿರ್ ಗುಲಾಲ್ ಚಿತ್ರ ಭಾರತದಲ್ಲಿ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಉಗ್ರರು ಪ್ರವಾಸಿಗರ ಮೇಲೆ ಭೀಕರವಾಗಿ ಗುಂಡಿನ ದಾಳಿ ನಡೆಸಿದರು. ಈ ಒಂದು ಗುಂಡಿನ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ ಪ್ರವಾಸಿಗರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಪಾಕಿಸ್ತಾನ ಚಿತ್ರಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಯುತ್ತಿದ್ದು, ಹಾಗಾಗಿ ಈ ಒಂದು ಸಿನಿಮಾ ಮೇ 9 ರಂದು ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಉಗ್ರರ ದಾಳಿಯ ಘಟನೆ ಯಿಂದ ಇದೀಗ ಪಾಕಿಸ್ತಾನ ಚಿತ್ರ ಭಾರತದಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಹೌದು ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದಲೂ ತೊಂದರೆಯಲ್ಲಿತ್ತು. ಈ ಭಯೋತ್ಪಾದಕ ದಾಳಿಯಿಂದಾಗಿ ಸಾಮಾನ್ಯ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈಗ ಚಲನಚಿತ್ರ ನಿರ್ಮಾಪಕ ಕೂಡ ಚಿಂತಿತರಾಗಿದ್ದಾರೆ.
ಆರತಿ ಎಸ್ ಬಗ್ಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ರೊಮ್ಯಾಂಟಿಕ್ ಹಾಸ್ಯ ಚಿತ್ರ ಮೇ 9 ರಂದು ಬಿಡುಗಡೆಯಾಗ್ ಆದರೆ ಅದಕ್ಕೂ ಮೊದಲು ನಡೆದ ಪಹಲ್ಗಾಮ್ ದಾಳಿಯಿಂದ ಚಿತ್ರವನ್ನು ನಿಷೇಧಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬೇಡಿಕೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ಈ ಒಂದು ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.