ಜೈಪುರ: ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಅವರ ಮೂವರು ಮಕ್ಕಳು ಗುರುವಾರ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ವಾಷಿಂಗ್ಟನ್ ಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾನ್ಸ್ ಕುಟುಂಬ ಸೋಮವಾರ ರಾತ್ರಿ ದೆಹಲಿಯಿಂದ ಜೈಪುರಕ್ಕೆ ಆಗಮಿಸಿತು. ಕಾರ್ಯಕ್ರಮವೊಂದರಲ್ಲಿ ವ್ಯಾನ್ಸ್ ಭಾರತ-ಯುಎಸ್ ಸಂಬಂಧದ ಬಗ್ಗೆ ಭಾಷಣ ಮಾಡುವ ಮೊದಲು ಅವರು ಮಂಗಳವಾರ ಅಂಬರ್ ಕೋಟೆಗೆ ಭೇಟಿ ನೀಡಿದರು.
ಜೈಪುರಕ್ಕೆ ಮರಳುವ ಮೊದಲು ಅವರು ಬುಧವಾರ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜಧಾನಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗುವ ಮೊದಲು ವ್ಯಾನ್ಸ್ ಸೋಮವಾರ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ತಮ್ಮ ಭಾರತ ಪ್ರವಾಸವನ್ನು ಪ್ರಾರಂಭಿಸಿದರು.