ಶ್ರೀನಗರ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಕಾರ್ಯಾಚರಣೆ ಕೈಗೊಂಡಿರುವ ಗುಪ್ತಚರ ಇಲಾಖೆ ಸಂಸ್ಥೆ ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿದೆ.
ಹೌದು, ಜಮ್ಮುಕಾಶ್ಮೀರದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 150-200 ಕ್ಕೂ ಹೆಚ್ಚು ಉಗ್ರರು ಅಡಗಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಉಗ್ರರಿಗೆ ಪಾಕಿಸ್ತಾನ ಸೇನೆಯಿಂದ ಸಹಾಯ ಸಿಗುತ್ತಿದ್ದು, ಇವರಲ್ಲಿ ಹಿಜ್ಬುಲ್ಲಾ, ಮುಜಾಹಿದ್ದೀನ್, ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ಸೇರಿದ್ದಾರೆ. ಜೊತೆಗೆ 17 ಸ್ಥಳೀಯ ಉಗ್ರರು ಇದ್ದಾರೆ ಎಂದು ತಿಳಿದುಬಂದಿದೆ.