ಶ್ರೀನಗರ : ನಿನ್ನೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪಾರ್ಥಿವ ಶರೀರ ದೆಹಲಿಗೆ ಆಗಮಿಸಿದ್ದು, ಪಾರ್ಥಿವ ಶರೀರದ ಎದುರು ಅವರ ಪತ್ನಿ ರೋಧಿಸಿದ್ದಾರೆ. ಏಪ್ರಿಲ್ 16 ರಂದು ಮದುವೆಯಾಗಿ ಹನಿಮೂನ್ ಗೆಂದು ಅವರು ಕಾಶ್ಮೀರಕ್ಕೆ ತೆರಳಿದಾಗ ಈ ಒಂದು ಘೋರವಾದ ದುರಂತ ಸಂಭವಿಸಿದೆ.
ಉಗ್ರರು ಗುಂಡಿನ ದಾಳಿ ನಡೆಸುವ ಮುನ್ನ ವಿನಯ್ ಗುಂಡಿನ ದಾಳಿಗೆ ಯಾವ ಸ್ಥಳದಲ್ಲಿ ಸಾವನಪ್ಪಿದ್ದರು ಅದೇ ಸ್ಥಳದಲ್ಲಿ ವಿನಯ್ ತಮ್ಮ ಪತ್ನಿ ಹಿಮಾಂಶು ಅವರನ್ನು ತಬ್ಬಿಕೊಂಡು ಎತ್ತಿಕೊಂಡು ವಿಡಿಯೋ ಮಾಡಿದ್ದರು ಎನ್ನಲಾಗುತ್ತಿದೆ. ಇದೀಗ ವಿನಯ್ ಅವರು ಮಾಡಿದ ಕೊನೆಯ ವಿಡಿಯೋ ವೈರಲ್ ಆಗಿದೆ. ಪತ್ನಿಯನ್ನು ಎತ್ತಿಕೊಂಡು ತಬ್ಬಿಕೊಂಡು ವಿಡಿಯೋ ಮಾಡಿದ್ದು ನೋಡುಗರ ಕರಳು ಕಿವುಚುವಂತಿದೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಹಾಗೂ ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ. ಕನ್ನಡಿಗರ ಮೃತದೇಹವನ್ನು ಜಮ್ಮು-ಕಾಶ್ಮೀರದಿಂದ ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ 6 ಗಂಟೆಗೆ ಬೆಂಗಳೂರಿಗೆ ಬರಲಿದೆ.