ಶಿವಮೊಗ್ಗ: ಮೊದಲ ಪ್ರಯತ್ನದಲ್ಲೇ ಸಾಗರದ ಯುವಕನೊಬ್ಬ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಇಂದು ಪ್ರಕಟವಾದಂತ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 288ನೇ Rank ಅನ್ನು ಸಾಗರದ ವಿಕಾಸ್ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ವಿಕಾಸ್ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ 2024ರಲ್ಲಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾರೆ.
ಯುಪಿಎಸ್ಸಿ ಪರೀಕ್ಷಾ ತರಬೇತಿಗಾಗಿ ದೆಹಲಿಗೆ ತೆರಳಿದ್ದಂತ ಅವರು, ತರಬೇತಿಯ ಬಳಿಕ ಅಲ್ಲಿಯೇ ಪರೀಕ್ಷೆಯನ್ನು ಬರೆದಿದ್ದರು. ಇಂದು ಪ್ರಕಟವಾದಂತ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 288ನೇ Rank ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ್ದಾರೆ.
ಅಂದಹಾಗೇ ವಿಕಾಸ್ ಸಾಗರದ ಎನ್ ಜಿ ಎನ್ ಪೈ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದರೇ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಇಂಜಿನಿಯರಿಂಗ್ ವ್ಯಾಸಂಗವನ್ನು ಮೈಸೂರಿನ ಎನ್ ಐ ಕಾಲೇಜಿನಲ್ಲಿ ಇ ಅಂಡ್ ಇ ಕೋರ್ಸ್ ಮೂಲಕ ಮುಗಿಸಿದ್ದರು. ಸಾಗರದ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಜಯೇಂದ್ರ ಪಾಟೀಲ್ ಹಾಗೂ ಶಿಕ್ಷಕಿ ಮಹಾಲಕ್ಷ್ಮೀ ಹೆಗಡೆ ಅವರ ದಂಪತಿಗಳ ಪುತ್ರರಾಗಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ಪೋಪ್ ಫ್ರಾನ್ಸಿಸ್ ನಿಧನ ಹಿನ್ನಲೆ: ರಾಜ್ಯಾಧ್ಯಂತ ಎರಡು ದಿನ ಶೋಕಾಚರಣೆ ಘೋಷಣೆ
BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ