ಬೆಂಗಳೂರು: ಪೋಪ್ ಫ್ರಾನ್ಸಿಸ್ ನಿಧನದ ಹಿನ್ನಲೆಯಲ್ಲಿ ದೇಶಾದ್ಯಂತ ಎರಡು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು ಕರ್ನಾಟಕದಲ್ಲೂ ಎರಡು ದಿನ ಶೋಕಾಚರಣೆ ಘೋಷಿಸಿ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, “His Holiness Pope Francis, Supreme Pontiff of the Holy See” ಇವರು ದಿನಾಂಕ: 21.04.2025 ರಂದು ನಿಧನ ಹೊಂದಿರುತ್ತಾರೆ. ಅಗಲಿದ ಗಣ್ಯರ ಗೌರವಾರ್ಥವಾಗಿ ದಿನಾಂಕ: 22.04.2025 ಮತ್ತು 23.04.2025ರ ಎರಡು ದಿನಗಳು ದೇಶದಾದ್ಯಂತ ಶೋಕಾಚರಣೆ ಮಾಡಲು ಘನ ಭಾರತ ಸರ್ಕಾರವು ನಿರ್ಧರಿಸಿರುತ್ತದೆ ಎಂದಿದೆ.
ದಿವಂಗತರ ಗೌರವಾರ್ಥವಾಗಿ ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುವುದು. ಸದರಿ ಅವಧಿಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಮತ್ತು ನಿಯತವಾಗಿ ಹಾರಿಸಲ್ಪಡುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂಬುದಾಗಿ ಹೇಳಿದೆ.
‘ಪಂಚಕರ್ಮ’ವು ದೀರ್ಘಕಾಲಿಕ ರೋಗಗಳಿಗೆ ಪರಿಣಾಮಕಾರಿಯೇ.? ಇಲ್ಲಿದೆ ಡೀಟೆಲ್ಸ್ | Panchakarma Treatment
BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ