ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ವಿನಾಕಾರಣ ಹಾರ್ನ್ ಯಾಕೆ ಹೊಡಿತಿಯ ಎಂದು ಆಟೋ ಚಾಲಕನಿಗೆ ಕಾರು ಚಾಲಕ ಕೇಳಿದ್ದಕ್ಕೆ ಆಟೋ ಚಾಲಕ ಮಧ್ಯದ ಬೆರಳು ತೋರಿಸಿ ನಿಂದಿಸಿರುವ ಘಟನೆ ವರದಿಯಾಗಿದೆ.
ಹೌದು ಹಾರ್ನ್ ಹೊಡೆದಿರುವ ಬಗ್ಗೆ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿ ಅವಾಜ್ ಹಾಕಲಾಗಿದೆ. ಅಲ್ಲದೇ ಮಧ್ಯದ ಬೆರಳು ತೋರಿಸಿ ಆಟೋ ಚಾಲಕ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಎರಡು ದಿನಗಳ ಹಿಂದೆ ಜೆಪಿ ನಗರದ 8ನೇ ಹಂತದ ರಸ್ತೆಯಲ್ಲಿ ಘಟನೆ ನಡೆದಿದ್ದು, ಹಾರ್ನ್ ಮಾಡಿ ಆಟೋ ಚಾಲಕ ಕಿರಿಕಿರಿ ಉಂಟು ಮಾಡುತ್ತಿದ್ದ.
ಯಾಕೆ ಸುಮ್ಮನೆ ಹಾರ್ನ್ ಮಾಡ್ತೀರಾ ಅಂತ ಕೇಳಿದ್ದಕ್ಕೆ ಆಟೋ ಚಾಲಕ ಕಿರಿಕ್ ಮಾಡಿದ್ದಾನೆ. ಅಲ್ಲದೆ ವಿಡಿಯೋ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿ ನಿಂದಿಸಿದ್ದಾನೆ. ಕೂಡಲೆ ಕಾರು ಚಾಲಕ ಹೊಯ್ಸಳ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾನೆ. ಪೊಲೀಸರಿಗೆ ಹೆದರಿ ಆಟೋ ಸಮೇತ ಯುವಕರ ಗುಂಪು ಅಲ್ಲಿಂದ ಪರಾರಿಯಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.