ಬೆಂಗಳೂರು: ಬಿಎಂಟಿಸಿಯಿಂದ 2286 ನಿರ್ವಾಹಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಈ ನೇಮಕಾತಿಯ ಕುರಿತಂತೆ ಬಿಎಂಟಿಸಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂ.ಮ.ಸಾ.ಸಂಸ್ಥೆಯಲ್ಲಿ ನಿರ್ವಾಹಕ (ಉಳಿಕೆ ಮೂಲ ವೃಂದದ) 2286 ಹುದ್ದೆಗಳಿಗೆ ದಿನಾಂಕ:03.12.2024 ರಂದು ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಯನ್ನು ಮುಕ್ತಾಯಗೊಳಿಸಿ, ಅರ್ಹ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ದಿನಾಂಕ:20.01.2025 ರಂದು ಪ್ರಕಟಿಸಲಾಗಿದೆ ಹಾಗೂ ದಿನಾಂಕ:31.01.2025ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದಿದೆ.
ಅದರಂತೆ 34 ಅಭ್ಯರ್ಥಿಗಳು 8 ವಿವಿಧ ಅಂಶಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ. ಅದರಲ್ಲಿ ಯೋಜನಾ ನಿರಾಶ್ರಿತ ಸಮತಳ ಮೀಸಲಾತಿಗೆ ಸಂಬಂಧಿಸಿದಂತೆ 22 ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದು, ಸದರಿ ಆಕ್ಷೇಪಣೆ ಕುರಿತು ಸರ್ಕಾರದ ಮಾರ್ಗದರ್ಶನ ಕೋರಿ ದಿನಾಂಕ:12.02.2025 ರಂದು ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿದೆ.
ಇನ್ನೂ ಸರ್ಕಾರದಿಂದ ಮಾರ್ಗದರ್ಶನ ದೊರೆತ ಕೂಡಲೇ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿ, ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಯಾವುದೇ ರೀತಿಯ ಗೊಂದಲ ಮತ್ತು ದುರುದ್ದೇಶಪೂರಿತ ಸಂದೇಶಗಳಿಗೆ ಕಿವಿಗೊಡದೇ, ಸಹಕರಿಸಲು ಬಿಎಂಟಿಸಿ ಕೋರಿದೆ.
ಸಚಿವ ಮಧು ಬಂಗಾರಪ್ಪ ಜನಸ್ಪಂದನಕ್ಕೆ ಭರ್ಜರಿ ರೆಸ್ಪಾನ್ಸ್: ಅರ್ಜಿಗಳ ಮಹಾಪೂರ
ಸ್ಮಾರ್ಟ್ ಮೀಟರ್ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ದೂರು: ಡಾ.ಸಿ.ಎನ್.ಅಶ್ವತನಾರಾಯಣ್