ಬೀದರ್ : ಬೀದರ್ ನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಬಾವಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಜಲಸಮಾಧಿ ಆಗಿರುವ ಘಟನೆ ಬೀದರ್ ಜಿಲ್ಲೆಯ ಹುಣಸೂರು ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.
ಅವಿನಾಶ್ ಮಚಕೂರೆ (16) ಬಾಗೇಶ್ (16) ಎನ್ನುವ ಬಾಲಕರು ಬಾವಿಯಲ್ಲಿ ಈಜಲು ತೆರಳಿದಾಗ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಇಬ್ಬರು ಬಾಲಕರ ಮೃತ ದೇಹವನ್ನು ಹೊರಗಡೆ ತೆಗೆದಿದ್ದಾರೆ. ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.