ದಕ್ಷಿಣಕನ್ನಡ : ನಾನೊಂದು ಸರ್ವೇ ಮಾಡಿದ್ದೇನೆ. ಆ ಸರ್ವೇ ಪ್ರಕಾರ ಮುಂದಿನ 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಬರೆದಿಟ್ಟುಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ ಬರೆದಿಟ್ಟುಕೊಳ್ಳಿ. ನಾನೊಂದು ಸರ್ವೇ ಮಾಡಿದ್ದೇನೆ. ಇಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲ್ಲಲಿದೆ. ಸರ್ವೇ ಪ್ರಕಾರ ಬೆಳ್ತಂಗಡಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಆತ್ಮಶಕ್ತಿಯ ಮತಗಳು ಇನ್ಮುಂದೆ ನಮಗೆ ಬೀಳುತ್ತದೆ. ಬಿಜೆಪಿಯವರು ಗ್ಯಾರಂಟಿಗಳನ್ನು ತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಐದು ಬೆರಳುಗಳು ಸೇರಿ ಮುಷ್ಟಿ ಆದಂತೆ, 5 ಗ್ಯಾರಂಟಿ ಯೋಜನೆಗಳು ಸೇರಿ ಕಾಂಗ್ರೆಸ್ ಗಟ್ಟಿಯಾಗಿದೆ.
ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ವಿಚಾರದಲ್ಲಿ ಯೋಜನೆ ಹಾಕಿದ್ದೇವೆ. ಎಲ್ಲಾ ಧರ್ಮದವರನ್ನು ನಾವು ಇಲ್ಲಿ ರಕ್ಷಣೆ ಮಾಡುತ್ತೇವೆ. ಕಾರ್ಕಳದಲ್ಲಿ ಒಬ್ಬರು ಹಿಂದೂ ಧರ್ಮ ನಮ್ಮ ಆಸ್ತಿ ಅಂತ ತಿರುಗುತ್ತಾರೆ.ಆದರೆ ಕಾರ್ಕಳದಲ್ಲಿ ಪರಶುರಾಮನ ಮೂರ್ತಿ ಕೊಲೆಯಾಗಿಬಿಟ್ಟಿದೆ. ಬಿಜೆಪಿಯವರ ಸಾಕ್ಷಿ ಗುಡ್ಡೆ ಅಲ್ಲಿನ ಪರಶುರಾಮನ ಮೂರ್ತಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.