ಬೆಂಗಳೂರು : ಬೆಂಗಳೂರಿನಲ್ಲಿ ಅಮಾನವೀಯವಾದ ಘಟನೆ ಒಂದು ನಡೆದಿದ್ದು, ಪ್ರಿಯತಮನಿಂದ ಅಪ್ರಾಪ್ತೆಗೆ ಜನಿಸಿದ ಮಗು ಕಸದ ಬುಟ್ಟಿಯಲ್ಲಿ ಪತ್ತೆಯಾಗಿದೆ. ಈ ಒಂದು ಘಟನೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿ ಯುವಕನನ್ನು ಅರೆಸ್ಟ್ ಮಾಡಿದ್ದು, ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
21 ವರ್ಷ ಯುವಕನಿಂದ ಅಪ್ರಾಪ್ತೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ನೆರೆಮನೆಯವರ ಸಹಾಯದಿಂದಲೇ ಮನೆಯಲ್ಲಿಯೇ ರಾತ್ರಿ ಬಾಲಕಿಗೆ ಹೆರಿಗೆ ಆಗಿದೆ. ಹೆರಿಗೆ ನಂತರ ಪೊರೆ ತೆರೆಯದ ಕಾರಣ ಮಗು ಸಾವನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ನಂತರ ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಕಸದ ಗಾಡಿಗೆ ಮಗುವನ್ನು ಡಂಪ್ ಮಾಡಿದ್ದಾರೆ.
ಪಕ್ಕದ ಮನೆ ಅವರ ಕೈಗೆ ಕೊಟ್ಟು ಕಸದ ಲಾರಿಗೆ ಮಗುವನ್ನು ಎಸೆದಿದ್ದಾರೆ. ಯಲಹಂಕದ ಬಳಿ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಮಗು ಸಾವನಪ್ಪಿತ್ತು. ಪೇಪರ್ ಆಯುವವರು ಬ್ಯಾಕ್ ಅತಿದಾಗ ಮಗು ಕೆಳಗಡೆ ಬಿದ್ದಿದೆ ತಕ್ಷಣ ಅವರು ಹೆದರಿ ಅಲ್ಲಿಂದ ಓಡಿ ಹೋಗಿದ್ದಾರೆ ಕೂಡಲೇ ಸ್ಥಳೀಯರು ಮಗುವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡು ಆರೋಪಿ ಯುವಕನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.