ಬೆಂಗಳೂರು: 2025-26ರ ವರ್ಷದ ಅಗ್ನಿವೀರ್ ನೇಮಕಾತಿ ರ್ಯಾಲಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ನೋಂದಣಿ ಪ್ರಕ್ರಿಯೆಯು 2025ನೇ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 25 ರವರೆಗೆ ನೋಂದಣಿ ಮಾಡಿಕೊಳ್ಳಬಹುದು.
ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನೀವೀರ್ ಕಚೇರಿ ಸಹಾಯಕ /ಸ್ಟೋರ್ ಕೀಪರ್ ತಾಂತ್ರಿಕ, ಅಗ್ನಿವೀರ್ ಟ್ರೇಡ್‍ಮನ್ ಗೆ 10 ತರಗತಿ ಪಾಸಾಗಿರಬೇಕು ಹಾಗೂ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೆÇಲೀಸ್), ನಸಿರ್ಂಗ್ ಅಸಿಸ್ಟೆಂಟ್, ನಸಿರ್ಂಗ್ ಅಸಿಸ್ಟೆಂಟ್ ಪಶುವೈದ್ಯಕೀಯ ಮತ್ತು ಸಿಪಾಯ್ ಫಾರ್ಮಾ ಅಗ್ನಿವೀರ್ ಟ್ರೇಡ್‍ಮನ್ ಗೆ 8 ತರಗತಿ ಪಾಸಾಗಿರಬೇಕು.
ನೋಂದಾಯಿಸಿಕೊಳ್ಳಲು ಪ್ರತಿ ವರ್ಗದ ವಯಸ್ಸು, ಶೈಕ್ಷಣಿಕ ಅರ್ಹತೆಗಳು ಮತ್ತು ಇತರ ಮಾನದಂಡಗಳ ಬಗ್ಗೆ ವಿವರವಾದ ಮಾಹಿತಿಯನ್ನು www.joinindianarmy.nic.in ನಲ್ಲಿ ಅಪ್‍ಲೋಡ್ ಮಾಡಲಾಗಿರುವ ಅಧಿಸೂಚನೆಯಲ್ಲಿ ಲಭ್ಯವಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಭಾರತೀಯ ಸೈನ್ಯದ ವೆಬ್‍ಸೈಟ್ www.joinindianarmy.nic.in ನಲ್ಲಿ ಖಾತೆಯನ್ನು ರಚಿಸಬೇಕು ಮತ್ತು ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.
ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳ ಉದ್ಬವಿಸಿದಲ್ಲಿ ಬೆಂಗಳೂರು ನೇಮಕಾತಿ ಕಚೇರಿ ದೂರವಾಣಿ ಸಂ. 080-29516517, ಇ-ಮೇಲ್ ವಿಳಾಸ arobengaluru@gmail.com, ಮಂಗಳೂರು ಏರಿಯಾ ನೇಮಕಾತಿ ಕಚೇರಿ ದೂರವಾಣಿ ಸಂ. 082-42951279, ಇ-ಮೇಲ್ ವಿಳಾಸ aromangalore@gmail.com ಮತ್ತು ಬೆಳಗಾವಿ ಏರಿಯಾ ನೇಮಕಾತಿ ಕಚೇರಿ ದೂರವಾಣಿ ಸಂ. 0831-2950001, ಇ-ಮೇಲ್ ವಿಳಾಸ arobgm4@gmail.com ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.