Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ‘SSLC ಪರೀಕ್ಷೆ’ ಬರೆದು ಫಲಿತಾಂಶ ಕಾಯುತ್ತಿದ್ದೀರಾ.? ನಿಮ್ಮ ಮುಂದಿನ ಕೋರ್ಸ್ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ
KARNATAKA

ನೀವು ‘SSLC ಪರೀಕ್ಷೆ’ ಬರೆದು ಫಲಿತಾಂಶ ಕಾಯುತ್ತಿದ್ದೀರಾ.? ನಿಮ್ಮ ಮುಂದಿನ ಕೋರ್ಸ್ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ

By kannadanewsnow0917/04/2025 2:11 PM

ಕೆಎನ್ಎನ್ ಸ್ಪೆಷಲ್ ಡೆಸ್ಕ್: ಎಸ್ ಎಸ್ ಎಲ್ ಸಿ ಮುಗಿತಾ ಇದೆ ಮುಂದೆ ಏನು ಓದಬೇಕು, ಎಲ್ಲಿ ಓದಬೇಕು, ಯಾವುದು ಓದಬೇಕು ಎಂದು ಸಾಕಷ್ಟು ಗೊಂದಲಗಳೊಂದಿಗೆ ನೀವು ಕರಿಯರ್ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ನಿಮಗೆ ಒಂದೇ ಸೂರಿನಡಿ ಸಿಗುವ ಸಾಕಷ್ಟು ಕೋರ್ಸ್ ಗಳ ಅವಕಾಶಗಳನ್ನು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನೀಡುತ್ತಿದೆ.

ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ತಾಂತ್ರಿಕ ಶಿಕ್ಷಣದ ಜೊತೆಗೆ ಕೈಗಾರಿಕಾ ಸವಾಲುಗಳಿಗೆ ಸಿದ್ಧವಾಗಿರುವ ಕೌಶಲ್ಯಪೂರ್ಣ ವೃತ್ತಿಪರರನ್ನು ರೂಪಿಸುವಲ್ಲಿ ಜಿಟಿಟಿಸಿ ನಿರ್ಣಾಯಕ ಪಾತ್ರವಹಿಸುತ್ತಿದೆ.  ಇದು ತಾಂತ್ರಿಕ ತರಬೇತಿಯಲ್ಲಿ ಶ್ರೇಷ್ಠತೆಯ ಸಂಕೇತವಾಗಿ ನಿಂತಿದೆ. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ಒದಗಿಸುವಲ್ಲಿ‌ ಜಿಟಿಟಿಸಿ ಮುಂಚೂಣಿಯಲ್ಲಿದೆ. ಕರ್ನಾಟಕದಾದ್ಯಂತ ಒಟ್ಟು 33 ಸೆಂಟರ್ ಗಳಲ್ಲಿ ಅತ್ಯಾಧುನಿಕ ತಾಂತ್ರಿಕ ಶಿಕ್ಷಣದ ಜೊತೆ ಆರ್ಟಿಫಿಯಲ್ ಇಂಟಲಿಜೆನ್ಸ್ ಮತ್ತು ರೋಬಿಟಿಕ್ಸ್ ನಂತಹ ಹಲವು ಹೊಸ ತಂತ್ರಜ್ಞಾನವನ್ನು ಒಳಗೊಂಡ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡುತ್ತಿದೆ.

ಜಿಟಿಟಿಸಿ ಏನು?

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ‌ ಕೇಂದ್ರವು ಕರ್ನಾಟಕ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಜಂಟಿ ಸಹಯೋಗದ ಉದ್ಯಮವಾಗಿದ್ದು, 1972ರಲ್ಲಿ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭವಾಯಿತು. ಜಿಟಿಟಿಸಿ ವಿನ್ಯಾಸ ಮತ್ತು ನಾವಿನ್ಯತೆ ಮತ್ತು ಉಪಕರಣದ ಉತ್ಪಾದನಾ ಅಂಶಗಳು, ಪ್ರಿಸಿಷನ್ ಉತ್ಪಾದನೆ, ಮೆಕಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಅಟೋಮೇಶನ್ & ರೋಬೋಟಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜನ್ಸಿಯನ್ನು ಒಳಗೊಂಡ ವಿಷಯಗಳ ಸುತ್ತ ಅತ್ಯಂತ ಪ್ರಯೋಗಾತ್ಮಕ ಅನುಭವಗಳನ್ನು ಒಳಗೊಂಡ ಕೊರ್ಸ್ ಗಳನ್ನು ಒದಗಿಸುತ್ತಿದೆ.  ಈ ಕೋರ್ಸ್‌ಗಳು ಉತ್ಪಾದನಾ ವಲಯದಲ್ಲಿ ಅಗತ್ಯ ಇರುವ ಬೇಡಿಕೆಯ ಮತ್ತು ಅತ್ಯಂತ ಉನ್ನತ ಗುಣಮಟ್ಟದ ತಾಂತ್ರಿಕ ಮಾನವ ಸಂಪನ್ಮೂಲವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಟೀಚರ್ ಮತ್ತು ಟ್ರೈನಿಗಳ ಸಕ್ರಿಯತೆಗೆ ಹೆಚ್ಚು ಒತ್ತು ನೀಡುತ್ತದೆ. ಕೈಗಾರಿಕೆಗಳಿಗೆ ಕೌಶಲ್ಯಭರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸಲು ರಾಜ್ಯಾದ್ಯಂತ 36 GTTC ಕೇಂದ್ರಗಳನ್ನು ಪ್ರಾರಂಭಿಸಿದೆ. ಎರಡು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ವಿವಿಧ ದೀರ್ಘಾವಧಿ ಮತ್ತು ಅಲ್ಪಾವಧಿಯ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳು ಮತ್ತು  ಎಂಟೆಕ್ ಮತ್ತು ಇಂಜಿನಿಯಂರಿಂಗ್  ವಿದ್ಯಾರ್ಥಿ ಯುವಜನರಿಗೆ ಇಂಟರ್ನ್ ಶಿಪ್ ತರಬೇತಿ ಪಡೆದು ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತಿದ್ದಾರೆ.

GTTC ಅನ್ನು ಏಕೆ ಆರಿಸಬೇಕು?

ಯುವಜನರಿಗೆ ಉದ್ಯಮ-ಕೇಂದ್ರಿತ ತಾಂತ್ರಿಕ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು ಮತ್ತು ಅವರನ್ನು ಉದ್ಯೋಗಾರ್ಹತೆಯ ಕೌಶಲ್ಯಗಳೊಂದಿಗೆ ಸಜ್ಜಾಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಜಿಟಿಸಿಯು ಟೂಲ್ ಮತ್ತು ಡೈ ಮೇಕಿಂಗ್, ಎಂಜಿನಿಯರಿಂಗ್, CAD/CAM ಮತ್ತು ಮೆಕಾಟ್ರಾನಿಕ್ಸ್‌ನಂತಹ ಕ್ಷೇತ್ರಗಳಲ್ಲಿ ವಿಶೇಷ ತರಬೇತಿಯನ್ನು ನೀಡುವ ಮೂಲಕ ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ‌. ವಿದ್ಯಾರ್ಥಿ ಯುವಜನರು ಕೇವಲ ಸಿದ್ಧಾಂತಗಳನ್ನು ಕಲಿಯುವುದಲ್ಲದೆ, ನೈಜ-ಪ್ರಪಂಚದ ತಂತ್ರಜ್ಞಾನದ ಮಿಂಚೋಟದಲ್ಲಿ ಪಾಯೋಗಿಕ ಕಲಿಕೆಯಲ್ಲಿ ತಮ್ಮನ್ನು ತಾವು  ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಅಪ್ ಡೇಟ್ ಆದ ಪಠ್ಯಕ್ರಮದ ಜೊತೆಗೆ, ನಾವೀನ್ಯತೆ ಹೊಂದಿರುವ ಪ್ರಾಯೋಗಿಕ ಲ್ಯಾಬ್ ಗಳು, ಹ್ಯಾಂಡ್ಸ್ ಆನ್ ಎಕ್ಸಿಫಿರಿಯನ್ಸ್   ಮತ್ತು ಗುಣಮಟ್ಟದ ಟೀಚರ್ ಗಳನ್ನು ಹೊಂದಿದ್ದು, ಪ್ಲೇಸ್ ಮೆಂಟ್ ಗ್ಯಾರಂಟಿಯನ್ನು ನೀಡುತ್ತಿರುವುದು ವಿಶೇಷವಾಗಿದೆ.

  • 100% ಉದ್ಯೋಗ ಸಹಾಯ
  • ವಾಣಿಜ್ಯೋದ್ಯಮ ಮತ್ತು ಹೊಸ ಸ್ಟಾರ್ಟ್ ಅಪ್ ಸಪೋರ್ಟ್
  • ವಿಶ್ವಾದ್ಯಂತ ಕೆಲಸಗಳ ಅವಕಾಶಗಳು
  • ಜರ್ಮನ್ ಮತ್ತು ಜಪಾನೀಸ್ ಭಾಷಾ ಕಲಿಕೆಗೆ ಅವಕಾಶ
  • ಪಾತ್‌ವೇ ಪ್ಲೇಸ್‌ಮೆಂಟ್‌ಗಳು
  • ಉದ್ಯಮ-ಆಧಾರಿತ ತರಬೇತಿ

 ಪ್ರಾಯೋಗಿಕ ಕಲಿಕೆ ಗೆ ಹೆಚ್ಚು ಹೊತ್ತು ನೀಡುತ್ತಾ, ಸುಧಾರಿತ ಪ್ರಯೋಗಾಲಯಗಳು ಮತ್ತು ಪ್ರಾಯೋಗಿಕ ಯೋಜನೆಗಳನ್ನು ರೂಪಿಸಿದೆ, ಅಲ್ಲದೆ ಪ್ರಮುಖ ಕಂಪನಿಗಳೊಂದಿಗೆ ಇಂಟರ್ನ್‌ಶಿಪ್‌ಗಳು ಮತ್ತು ಕೆಲಸದ ಅವಕಾಶಗಳು ಜೊತೆಗೆ ಕೆಲಸ ಪಡೆಯಲು ಬೇಕಾದ ಪೂರ್ವ ತಯಾರಿಕಾ  ಸಿದ್ಧತೆಯ ತರಬೇತಿಯನ್ನು ಯುವಜನರಿಗೆ ನೀಡುತ್ತಿದೆ. ಸಾಪ್ಟ್ ಸ್ಕಿಲ್, ಕಮ್ಯುನಿಕೇಷನ್ ಸ್ಕಿಲ್ ಜೊತೆಗೆ ಇಂಗ್ಲಿಷ್, ಜರ್ಮನ್, ಜಪಾನ್ ಭಾಷಾ ಕಲಿಕೆಯನ್ನು ಪಠ್ಯಕ್ರಮದಲ್ಲಿ ತಂದಿರುವುದು ವಿಶೇಷವಾಗಿದೆ.

ಡಿಪ್ಲೊಮಾ ಕೋರ್ಸ್‌ಗಳು

GTTC ವ್ಯಾಪಕ ಶ್ರೇಣಿಯ ಡಿಪ್ಲೊಮಾ, ಪ್ರಮಾಣಪತ್ರ ಮತ್ತು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳ ಜೊತೆಗೆ ಎಂಟೆಕ್ ಮತ್ತು ಇಂಟರ್ನ್ ಶಿಪ್ ನಂತಹ ಹಲವು ಅವಕಾಶಗಳನ್ನು ಒದಗಿಸುತ್ತದೆ.

ಡಿಪ್ಲೊಮಾ ಕೋರ್ಸ್ ಗಳು:

  • ಡಿಪ್ಲೊಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್
  • ಡಿಪ್ಲೊಮಾ ಇನ್ ಆಟೋಮೇಷನ್ ಮತ್ತು ರೊಬೊಟಿಕ್ಸ್
  • ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
  • ಡಿಪ್ಲೊಮಾ ಇನ್‌ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್
  • ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್
  • ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಟರಿಂಗ್
  • ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

ಪ್ರತಿಯೊಂದು ಕಾರ್ಯಕ್ರಮವು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅಗತ್ಯವಿರುವ ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅನುಗುಣವಾಗಿರುತ್ತದೆ.

ಅತ್ಯಾಧುನಿಕ ಸೌಲಭ್ಯಗಳು

GTTC ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮುನ್ನಡೆಯುವುದರಲ್ಲಿ ನಂಬಿಕೆ ಇರಿಸಿದೆ. ಇದು ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದ್ದು, 3 ರಿಂದ 5 ಆಕ್ಸಿಸ್ ಹೈ-ಸ್ಪೀಡ್ CNC ವರ್ಟಿಕಲ್ ಮಷೀನಿಂಗ್ ಸೆಂಟರ್‌ಗಳು, CNC ಲೇಥ್, CNC ಟರ್ನರ್-ಮಿಲ್ಲರ್, CNC ಜಿಗ್ ಗ್ರೆಂಡಿಂಗ್. CNC ಸ್ಪಾರ್ಕ್ ಎರೋಷನ್, CNC ವೈರ್ EDM, CMM, ಪ್ರೊಫೈಲ್ ಪ್ರೊಜೆಕ್ಟರ್, ಕಟಿಂಗ್ ಮತ್ತು ಕೆತ್ತನೆಗೆ ಉನ್ನತ ಶಕ್ತಿಯ ಪವ‌ರ್ ಲೇಸರ್‌ಗಳಿವೆ.

GTTC ಯು ರೊಬೊಟಿಕ್ಸ್, ಇಂಡಸ್ಟ್ರಿಯಲ್ ಆಟೊಮೇಷನ್, ಹೈಡ್ರಾಲಿಕ್ಸ್ ಅಂಡ್ ನ್ಯುಮಾಟಿಕ್ಸ್, ಎಲೆಕ್ಟ್ರ-ನ್ಯುಮಾಟಿಕ್ಸ್, ಎಲೆಕ್ಟ್-ಹೈಡ್ರಾಲಿಕ್ಸ್, ಸೆನ್ಸರ್‌ಗಳು, ಮೈಕ್ರೋ ಕಂಟ್ರೋಲರ್‌ಗಳು, ಪ್ರೋಗ್ರಾಮಬಲ್ ಲಾಜಿಕ್ ಸರ್ಕ್ಯೂಟ್‌ಗಳು ಮತ್ತು ಕಂಟ್ರೋಲ್ ಸಿಸ್ಟಂಗಳೊಂದಿಗೆ ಸನ್ನದ್ಧವಾಗಿದ್ದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುತ್ತದೆ. ಆಟೊಕ್ಯಾಡ್, ಸಾಲಿಡ್‌ ವಕ್ಸ್, ಸಾಲಿಡ್ ಎಡ್ಜ್, ಮಾಸ್ಟರ್ ಕ್ಯಾಮ್, CREO, SIEMENS-NX CATIA & CNC ಸಿಮ್ಯುಲೇಶನ್‌ ನಂತಹ ಸಾಫ್ಟ್‌ವೇರ್ ಗಳ ತರಬೇತಿ ನೀಡುತ್ತದೆ.

ವೃತ್ತಿ ಅವಕಾಶಗಳು & ಉದ್ಯೋಗ ಬೆಂಬಲ

ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ತಜ್ಞ ಅಧ್ಯಾಪಕ ಸಿಬ್ಬಂದಿಯೊಂದಿಗೆ, GTTC ತನ್ನ ಪದವೀಧರರು ಉದ್ಯಮಕ್ಷೇತ್ರಕ್ಕೆ ಸಿದ್ಧರಾಗಿದ್ದಾರೆ‌ . ಅನೇಕ ಹಳೆ ವಿದ್ಯಾರ್ಥಿಗಳು (ಅಲುಮಿನಿ) ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಉದ್ಯಮಶೀಲತೆಗೆ ಕಾಲಿಟ್ಟು, ಸ್ಟಾರ್ಟ್ ಅಪ್ ಗಳನ್ನು ಯಶಸ್ವಿಯಾಗಿ ಮುನ್ನಡೆದುತ್ತಿದ್ದಾರೆ‌.

ತಾಂತ್ರಿಕ ಶಿಕ್ಷಣದ ಭವಿಷ್ಯ

AI, ಯಾಂತ್ರೀಕರಣ ಮತ್ತು ಉದ್ಯಮ 4.0 ನಲ್ಲಿನ ಪ್ರಗತಿಯೊಂದಿಗೆ ಕೈಗಾರಿಕೆಗಳು ವಿಕಸನಗೊಳ್ಳುತ್ತಲೇ ಇರುವುದರಿಂದ, GTTC ಯಂತಹ ಸಂಸ್ಥೆಗಳು ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತಿವೆ. GTTC ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡಲು ಮತ್ತು ನಾವೀನ್ಯಕಾರರನ್ನು ರೂಪಿಸಲು ಬದ್ಧವಾಗಿದೆ. ನೀವು ತಾಂತ್ರಿಕ ಕ್ಷೇತ್ರಗಳಲ್ಲಿ ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸಲು ಬಯಸಿದರೆ, GTTC ನಿಮ್ಮ ಯಶಸ್ಸಿನ ದ್ವಾರವಾಗಿದೆ!

ಜಿಟಿಟಿಸಿ ಸೆಂಟರ್ ಗಳು

ಹಾಸನ, ಬೆಳಗಾವಿ, ದಾಂಡೇಲಿ, ಹೊಸಪೇಟೆ, ಹುಬ್ಬಳ್ಳಿ, ಹರಿಹರ, ಮದ್ದೂರು, ಕೂಡಲಸಂಗಮ, ಕನಕಪುರ, ಲಿಂಗಸುಗೂರ್, ಗುಂಡ್ಲುಪೇಟೆ , ಕಡೂರು, ಹುಮನಾಬಾದ್, ಕೋಲಾರ, ತುಮಕೂರು, ಶಿವಮೊಗ್ಗ, ಗೌರಿಬಿದನೂರು, ಚಿಕ್ಕೋಡಿ, ಕೊಪ್ಪಳ, ಚಿತ್ರದುರ್ಗ, ಚಳ್ಳಕೆರೆ, ಯಾದಗಿರಿ, ಉಡುಪಿ, ಗೋಕಾಕ, ಮೈಸೂರು, ಮಂಗಳೂರು, ಬೆಂಗಳೂರು , ಗುಲ್ಬರ್ಗಾ, ದೇವನಹಳ್ಳಿ, ಮಾಗಡಿ, ಶಿಗ್ಗಾವಿ ಮತ್ತು ಹಾವೇರಿಯಲ್ಲಿ ಜಿಟಿಟಿಸಿ ಸೆಂಟರ್ ಗಳು ಇದಾವೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಸಿಟ್ ಮಾಡಿ: https://gttc.karnataka.gov.in.

 ಲೇಖನ: ಡಾ.ಶಾಲಿನಿ.ಆರ್

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ಸುಮ್ಮನೆ ಬಿಡುವುದಿಲ್ಲ: ಸಿದ್ಧರಾಮಯ್ಯ ವಿರುದ್ಧ HDK ಕಿಡಿ

BREAKING : ಧಾರವಾಡದಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ!

Share. Facebook Twitter LinkedIn WhatsApp Email

Related Posts

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

07/08/2025 9:21 PM2 Mins Read

ವರ ಮಹಾಲಕ್ಷ್ಮಿ ಹಬ್ಬದ ದಿನ ಎಚ್ಚರ ವಹಿಸಿ: ಮದ್ದೂರು ಪೋಲೀಸರ ಮನವಿ

07/08/2025 8:19 PM1 Min Read

‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’

07/08/2025 8:16 PM2 Mins Read
Recent News

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

BREAKING ; ಟೀಂ ಇಂಡಿಯಾಗೆ ಬಿಗ್ ಶಾಕ್ ; 2025ರ ಏಷ್ಯಾ ಕಪ್ ಸೇರಿ 2 ಪ್ರಮುಖ ಸರಣಿಗಳಿಂದ ‘ರಿಷಭ್ ಪಂತ್’ ಔಟ್ : ವರದಿ

07/08/2025 9:35 PM

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

07/08/2025 9:21 PM
State News
KARNATAKA

BREAKING: ಎಂಬಿಎ/ಎಂಸಿಎ ಕೋರ್ಸ್ ಪ್ರವೇಶಕ್ಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA

By kannadanewsnow0907/08/2025 9:21 PM KARNATAKA 2 Mins Read

ಬೆಂಗಳೂರು: ಎಂಬಿಎ/ಎಂಸಿಎ ಕೋರ್ಸ್ ಗಳ ಪ್ರವೇಶ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪಿಜಿಸಿಇಟಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.…

ವರ ಮಹಾಲಕ್ಷ್ಮಿ ಹಬ್ಬದ ದಿನ ಎಚ್ಚರ ವಹಿಸಿ: ಮದ್ದೂರು ಪೋಲೀಸರ ಮನವಿ

07/08/2025 8:19 PM

‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’

07/08/2025 8:16 PM

ಚಾಲಕ ಆತ್ಮಹತ್ಯೆ ಪ್ರಕರಣ: ಸಂಸದ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

07/08/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.