ಬೆಂಗಳೂರು : ಇಂದಿನಿಂದ ಮುಂದಿನ 5 ದಿನ ಸಂಜೆ, ರಾತ್ರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಈ ಕುರಿತು ಮುನ್ಸೂಚನೆ ನೀಡಿದೆ.
ಗುಡುಗು ಸಹಿತ ಭಾರಿ ಮಳೆ ಆಗುವ ಮುನ್ಸೂಚನೆ ನೀಡಿದೆ. ಇನ್ನು ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವಡೆ ಹಗುರ ಮಳೆ ಆಗುವ ಸಾಧ್ಯತೆ ಇದ್ದು ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ಸಂಜೆ ಮತ್ತು ರಾತ್ರಿಯ ವೇಳೆ ಮಳೆ ಆಗುವ ಸಾಧ್ಯತೆ ಇದೆ ಏಪ್ರಿಲ್ 20ರವರೆಗೆ ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಧಾರಾಕಾರ ಮಳೆ
ಇಂದು ಬೆಂಗಳೂರಿನಲ್ಲಿ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು ಬೆಂಗಳೂರಿನ ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್, ಜೆಪಿ ನಗರ,ಜಯನಗರ, ವಿಜಯನಗರ, ರಾಜಾಜಿನಗರ ಮಹದೇವಪುರ ಕೆ ಆರ್ ಪುರಂ ಟೀನ್ ಫ್ಯಾಕ್ಟರಿ ಮಾರತಹಳ್ಳಿ ಸೇರಿದಂತೆ ನಗರದ ಹಲವಡೆ ಧಾರಾಕಾರ ಮಳೆ ಸುರಿಯಿತು. ಈ ವೇಳೆ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಟ ನಡೆಸಿದರು.