ಉತ್ತರಪ್ರದೇಶ : ಇತ್ತೀಚಿಗೆ ಗುಜರಾತಿನ ವಾರಣಾಸಿಯಲ್ಲಿ 23 ಜನರು 19 ವರ್ಷದ ಯುವತಿಯ ಮೇಲೆ ಸತತವಾಗಿ 5 ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಘಟನೆ ಇಡೀ ದೇಶವೇ ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊಂದು ಘೋರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದದ್ದು, ಬಹಿರ್ದೆಸೆಗೆ ತೆರಳಿದ್ದ 21 ವರ್ಷದ ಯುವತಿಯ ಮೇಲೆ ಐವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಯುವತಿಯು ಬಹಿರ್ದೆಸೆಗೆ ಎಂದು ತೆರಳಿದ್ದಾಳೆ. ಈ ವೇಳೆ ಐವರು ಕಾಮುಕರು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕುರಿತಂತೆ ಹಮೀರ್ ಪುರದಲ್ಲಿ FIR ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಯುವತಿ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.