ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಹಣ ಹೂಡಿಕೆಯಿಂದ ಅಧಿಕ ಲಾಭ ಸಿಗಲಿದೆ ಎಂದು ಆಮಿಷವೊಡ್ಡಿದ ವಂಚಕ ವ್ಯಕ್ತಿಯೋರ್ವರಿಂದ ಬರೋಬ್ಬರಿ 65.51 ಲಕ್ಷ ಹಣ ಎಗರಿಸಿದ್ದಾನೆ.
ಹೌದು, ಬೆಂಗಳೂರಿನ ಬನಶಂಕರಿಯ ಮಂಜುನಾಥ್ ಎಂಬುವವರು ವಂಚನೆಗೆ ಒಳಗಾದವರು. ಮಂಜುನಾಥ್ ಅವರ ವಾಟ್ಸಾಪ್ ಗೆ ವಂಚಕನೊಬ್ಬ ಕಂಪನಿಯೊಂದರ ಹೆಸರಿನಲ್ಲಿ ಹಣ ಹೂಡಿಕೆ ಮಾಡುವ ಸಂದೇಶ ಕಳುಹಿಸಿದ್ದಾನೆ. ಮಂಜುನಾಥ್ ಲಿಂಗ್ ತೆರೆದಾಗ ನೋಂದಣಿ ಮಾಡಿಕೊಳ್ಳುವಂತೆ ಮತ್ತೊಂದು ಲಿಂಕ್ ಕಳುಹಿಸಲಾಗಿದೆ.
ಅಪರಿಚಿತ ಸೂಚಿಸಿದಂತೆ ಅಪ್ಲಿಕೇಶನ್ ಒಂದನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ವಂಚಕರು ನಮ್ಮ ಕಂಪನಿಯಲ್ಲಿ ಆ್ಯಪ್ ಮೂಲಕ ಹಣ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ಮಂಜುನಾಥ್ ವಿವಿಧ ಬ್ಯಾಂಕ್ ಖಾತೆಗಳಿಗೆ 65 ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ ಆಯಪ್‌ನಲ್ಲಿ ಹೂಡಿಕೆ ಮತ್ತು ಲಾಭ ಸೇರ ಒಟ್ಟು 1.08 ಕೋಟಿ ರು. ತೋರಿಸಿದೆ. ಈ ವೇಳೆ ಮಂಜುನಾಥ ಬಂಡವಾಳ ಮತ್ತು ಲಾಭ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಅಪರಿಚಿತರು ಸಂಪರ್ಕ ಕಡಿದುಕೊಂಡು ವಂಚಿಸಿದ್ದಾರೆ.