ಬೆಂಗಳೂರು : ಬೆಂಗಳೂರಿನಲ್ಲಿ ಅತಿ ವೇಗವಾಗಿ ತೆರಳುತ್ತಿದ್ದ ವಾಟರ್ ಟ್ಯಾಂಕ್ ಒಂದು, ನಿಯಂತ್ರಣ ಕಳೆದುಕೊಂಡು ಪಲ್ಟಿ ಆಗಿರುವ ಘಟನೆ ಬೆಂಗಳೂರಿನ ದೋಮ್ಮಸಂದ್ರ ಬಳಿ ನಡು ರಸ್ತೆಯಲ್ಲಿಯೇ ವಾಟರ್ ಟ್ಯಾಂಕ್ ಒಂದು ಪಲ್ಟಿಯಾಗಿದೆ.
ತಕ್ಷಣ ಸಾರ್ವಜನಿಕರು ವಾಟರ್ ಟ್ಯಾಂಕರ್ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಚಾಲಕ ಸೇರಿದಂತೆ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪಘಾತದಲ್ಲಿ ಯಾವುದೇ ರೀತಿಯಾದ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.