ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ವಿಜಯಪುರ ನಗರ ಶಾಸಕ ಯತ್ನಾಳ ಅವರನ್ನು ಉಚ್ಛಾಟಿಸಲಾಗಿದೆ. ಈ ಕುರಿತು ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದು, ಸೀತೆಯನ್ನು ರಾವಣ ಅಪಹರಿಸಿ ಹೇಗೆ ಕೆಟ್ಟವನಾದನೋ, ಯತ್ನಾಳ್ ಪರಿಸ್ಥಿತಿ ಹಾಗೆ ಆಗಿದೆ. ಯತ್ನಾಳ್ ಚೌಕಟ್ಟು ಮೀರಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ಹುಬ್ಬಳ್ಳಿಯಲ್ಲಿ ಮಾತನಾಡಿದರು.
ರಾವಣ ಒಳ್ಳೆಯವನಾಗಿದ್ದಕ್ಕೆ ಪರಶಿವನ ಆತ್ಮಲಿಂಗವನ್ನೇ ಪಡೆದಿದ್ದ. ಆದರೆ ಸೀತಾ ಅಪಹರಿಸಿ ರಾವಣ ಕೆಟ್ಟವನಾದ. ಯತ್ನಾಳ್ ಒಳ್ಳೆಯವರೇ ಆದರೆ ಅವರ ಬಾಯಿ ಒಂದು ಸಮಸ್ಯೆಯಾಗಿದೆ.ಯತ್ನಾಳ್ ಬಿಜೆಪಿಗೆ ಮರಳುವ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು ಎಂದು ಅವರು ತಿಳಿಸಿದರು.
ನನಗೆ ಯಾರೂ ವೈರಿ ಇಲ್ಲ ಯಾರ ಜೊತೆಗೂ ವೈರತ್ವ ಇರಬಾರದು. ಮುಂದಿನ ಒಂದುವರೆ ವರ್ಷ ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುತ್ತಾರೆ. ವಿಜಯೇಂದ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಮುಂದಿನ ಒಂದೂವರೆ ವರ್ಷ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.